ನಿವೃತ್ತ ನೌಕರರು ಸಮಾಜ ಕಟ್ಟುವ ಕಾರ್ಯದಲ್ಲಿ ಪಾಲ್ಗೊಳ್ಳಲಿ

23 mbl 1
Published on

ಮುಳಬಾಗಿಲು:  ನಿವೃತ್ತ ನೌಕರರು ನಿವೃತ್ತಿ ನಂತರ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆಯುವುದು ಪಿಂಚಣಿಯಿಂದ ಜೀವನ ಸಾಗಿಸುವುದರ ಮೇಲೆ ಹೆಚ್ಚು ಸಂಪೂರ್ಣ ಕೇಂದ್ರ ಕೃತವಾಗದೆ ಸಮಾಜ ಕಟ್ಟುವ ಕಾರ್ಯದಲ್ಲೂ ಪ್ರಮುಖ ಪಾತ್ರ ವಹಿಸುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಖಾಸಗಿ ಸಂಸ್ಥೆಯ ಮುಖ್ಯಸ್ಥ ಬೇವಹಳ್ಳಿ ಬಿ.ಜಿ.ರಾಮಕೃಷ್ಣಪ್ಪ ಹೇಳಿದರು.

ನಗರದ ಸಂತೆ ಮೈದಾನದ ಶ್ರೀ ಯೋಗಿ ನಾರೇಯಣ ಕಲ್ಯಾಣ ಮಂಟಪದಲ್ಲಿ ನಿವೃತ್ತ ನೌಕರರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ತೆರಿಗೆಯಲ್ಲಿ ಸರ್ಕಾರಗಳು ನಡೆಯುತ್ತಿವೆ ಮತ್ತು ಸರ್ಕಾರಿ ಉದ್ಯೋಗಗಳು

ಸಿಗುತ್ತವೆ. ಇದು ಅರ್ಜಿ ಹಾಕಿದ ಎಲ್ಲರಿಗೂ ಸಿಗೋದಿಲ್ಲ ಅಂತ ಅದೃಷ್ಟವಂತರು ನೀವಾಗಿದ್ದು, ನಿಮ್ಮ ಕುಟುಂಬವನ್ನು ನಿಮ್ಮ ಪರಿಸರವನ್ನು ಸರಿಪಡಿಸುವ ಜವಾಬ್ದಾರಿ ನಿವೃತ್ತಿ ನಂತರ ಮಾಡಬೇಕಾಗಿದೆ ಎಂದರು.

ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹನುಮನಹಳ್ಳಿ ಎಂ.ನಂಜುಂಡಪ್ಪ ಮಾತನಾಡಿ, ವಯೋ ವೃದ್ಧ ಪಾಲಕರ ಪಾಲನೆ ಮಾಡದೆ ರ್ನಿಲಕ್ಷ$್ಯ ಮಾಡುವುದು, ತಸ್ಸರ ಮನೋಭಾವದಿಂದ ಕಾಣುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದು ಈ ದೇಶದ ಸಂಸತಿ ಪರಂಪರೆಗೆ ದಕ್ಕೆ ತರುತ್ತಿರುವ ಅಂಶವಾಗಿದೆ. ಹೆತ್ತು ಬೆಳೆಸಿದ ತಂದೆ&ತಾಯಂದಿರನ್ನು ಆರೈಕೆ ಮಾಡದೆ ಇದ್ದಲ್ಲಿ ಅಂತಹ ಮಕ್ಕಳು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಮುನಿರತ್ನಯ್ಯ ಮಾತನಾಡಿ, ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು. ಪ್ರೀತಿಯಿಂದ ನೋಡಿಕೊಳ್ಳುವುದು, ನೆಮ್ಮದಿ ಜೀವನಕ್ಕೆ ಸಹಕರಿಸುವುದು ಪ್ರತಿಯೊಬ್ಬರ ಕರ್ತವ್ಯ. ವೃದ್ಧರಾದ ಕಾರಣಕ್ಕೆ ಪಾಲಕರ ಬಗ್ಗೆ ರ್ನಿಲಕ್ಷ$್ಯ ತೋರುವುದು, ವೃದ್ಧಾಶ್ರಮಕ್ಕೆ

ಸೇರಿಸುವುದು. ಕಿರುಕುಳ ನೀಡುವುದನ್ನು ಸಂಘಟಕರಾಗಿ ತಡೆಗಟ್ಟಬೇಕು ಎಂದು ಸಲಹೆ ನೀಡಿದರು.

ಸಂಘದ ಖಜಾಂಚಿ ಎಸ್​.ಜಯರಾಮ್​ ತಾಲೂಕಿನಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘ ಕಾರ್ಯ ಚಟುವಟಿಕೆ, ಆರಂಭದ ದಿನಗಳ ಸವಾಲುಗಳು ಮತ್ತು ಸಹಕಾರಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ತಾಲೂಕಿನ ಹಿರಿಯ ನಾಗರಿಕರಾದ ಕೆ. ಎಂ. ಅಚಿತ್​ ಕುಮಾರ್​, ಅಬ್ದುಲ್​ ರಫೀಕ್​, ಟಿ.ಎಂ.ಶ್ರೀನಿವಾಸ್​, ಡೆಕ್ಕನ್​ ಬಿ.ಜಿ.ರಾಮಕೃಷ್ಣಪ್ಪ, ಮಂಡಿಕಲ್​ ಎಂ.ವಿ.ಶ್ರೀನಿವಾಸ ಗೌಡ, ಅಂಗೊಂಡಹಳ್ಳಿ ಮುನಿಸ್ವಾಮಿ ಗೌಡ, ಹೆಬ್ಬಣಿ ಬಿ.ವಿ. ನಾಗಿರೆಡ್ಡಿ, ಕೆ.ಎಸ್​. ಸುಬ್ಬರಾಯಶೆಟ್ಟಿ, ಜನಾರ್ದನ್​ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ನೌಕರರ ಸಂಘದ ಜಿಲ್ಲಾ ಸಂಘದ ಪದಾಧಿಕಾರಿಗಳಾದ ಜಯರಾಮ ರೆಡ್ಡಿ, ನಾರಾಯಣ ರೆಡ್ಡಿ, ಕೆ.ಗೋಪಾಲ್​ ರೆಡ್ಡಿ, ಮುನಿಯಪ್ಪ, ನಾಗರಾಜ್​, ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಆಚರಣೆ

ಸಮಿತಿ ಮುಖ್ಯಸ್ಥ ಎಂ.ವಿ.ಜನಾರ್ಧನ್​, ಯಾನದಳ್ಳಿ ನಾರಾಯಣಸ್ವಾಮಿ, ಶಂಕರಪ್ಪ, ಚಾನ್​ ಪಾಷಾ,

ನರಸಿಂಹ ರೆಡ್ಡಿ, ಕಲ್ಲುಪಲ್ಲಿ ಕೃಷ್ಣಮೂರ್ತಿ, ಪೋಲಿಸ್​ ನಾಗಭೂಷಣಂ, ನಲ್ಲೂರು ಸೋಮಪ್ಪ, ರಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net