ಸಂಶೋಧನೆಗಳು ಸಮಾಜದ ಸಮಸ್ಯೆಗೆ ಪರಿಹಾರ ಒದಗಿಸಲಿ: ಪ್ರಾಂಶುಪಾಲ ಡಾ. ಎಂ.ಎಸ್. ಗಣೇಶ ಪ್ರಸಾದ್

college news
Published on

ಬೆಂಗಳೂರು: ವಿದ್ಯಾರ್ಥಿಗಳು ಕೈಗೊಳ್ಳುವ ಸಂಶೋಧನೆಗಳು ಸಮಾಜದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಿರಬೇಕು ಎಂದು ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಎಸ್. ಗಣೇಶ ಪ್ರಸಾದ್ ಅಭಿಪ್ರಾಯಪಟ್ಟರು.

ರಾಜಾನುಕುಂಟೆಯ ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಸಂವಹನ ಪ್ರಗತಿ ಹಾಗೂ ಕಂಪ್ಯೂಟಿಂಗ್ ತಂತಜ್ಞಾನ’ (ಐಎನ್‌ಒಎಸಿಸಿ-2025) ಕುರಿತ 3 ದಿನಗಳ ಜಾಗತಿಕ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಇದರ ಬಗ್ಗೆ ಸಂವಹನ ನಡೆಸಿ ಅಂತಹವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳು ಕೂಡ ಸಮಾಜಕ್ಕೆ ಉಪಯುಕ್ತವಾಗುವಂತಹ ಮತ್ತು ಸಂಪನ್ಮೂಲಗಳನ್ನು ಕಾಪಾಡುವಂತಹ ನೂತನ ಪರಿಕಲ್ಪನೆಯೊಂದಿಗೆ ಪ್ರಯೋಗಗಳನ್ನು ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಮ್ಮೇಳನದ ಮೂಲಕ ನಾನಾ ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಒಟ್ಟುಗೂಡಿಸಲಾಗಿದೆ. ಇದು ಸಂವಹನ ಮತ್ತು ಕಂಪ್ಯೂಟಿಂಗ್ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಹೆಚ್ಚಿಸಲು ನೆರವಾಗಿದೆ ಎಂದ ಅವರು, 3 ದಿನಗಳ ಕಾಲ ಪ್ರಸ್ತುತಪಡಿಸುವ ಸಂಶೋಧನಾ ಪ್ರಬಂಧಗಳನ್ನು ಐಇಇಇ ಎಕ್ಸ್‌ಪ್ಲೋರ್ ಜರ್ನಲ್‌ನಲ್ಲಿ ಪ್ರಕಟಿಸಲಾಗುವುದು ಎಂದು ವಿವರಿಸಿದರು.

ಸಮ್ಮೇಳನದಲ್ಲಿ 25 ದೇಶಗಳಿಂದ 298ಕ್ಕೂ ಹೆಚ್ಚು ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು, 42ಕ್ಕೂ ಹೆಚ್ಚು ನುರಿತ ತಂತ್ರಜ್ಞಾನ ಪರಿಣಿತರು ಭಾಗವಹಿಸಿದ್ದರು. ಐಎನ್‌ಒಎಸಿಸಿ 2025ರ ಕಾರ್ಯದರ್ಶಿ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ಡಾ. ಶಾಂತಕುಮಾರ್ ಪಾಟೀಲ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net