ಅಲೆಮಾರಿ ಜನಾಂಗದ ವಿಶೇಷತೆ ತಿಳಿಯಲು ಸಂಶೋಧನೆ ನಡೆಯಲಿ

Sudhee_23_Banjara_Book_Release_@_BM_Sri_Kala_Bhavan-1
Published on

ಬೆಂಗಳೂರು: ಬಂಜಾರ ಜನಾಂಗದವರು ಹಳೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಜತೆಗೆ ಆಧುನಿಕರಾಗಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಾಗೂ ಕಣ್ವ ಪ್ರಕಾಶನ ಸಹಯೋಗದಲ್ಲಿ ಸನ್ಮತಿ ಸಾಹಿತ್ಯ ಪೀಠ ವತಿಯಿಂದ ಎನ್​. ಆರ್​.ಕಾಲನಿಯ ಬಿಎಂಶ್ರೀ ಕಲಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಕೆ.ಬಿ.ಪವಾರ ಬರೆದಿರುವ "ಕೊಳ್ಳ' ಹಾಗೂ "ಬಂಜಾರ ಮತ್ತು ಜಪ್ಸಿ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಳ್ಳ ಕಾದಂಬರಿಯು ನಮ್ಮ ಹಳೆಯ ಅಸ್ಮಿತೆಯನ್ನು ಹೊಸದಾಗಿಸಲು ಹಾಗೂ ಬಂಜಾರ ಬದುಕನ್ನು ಕಟ್ಟಿಕೊಡುತ್ತದೆ. ಬುಡಕಟ್ಟು ಜನಾಂಗ ಆಧುನಿಕತೆಗೆ ಬರಲು ಅನೇಕ ಬಿಕ್ಕಟ್ಟು ಇದೆ. ನಮ್ಮ ಸಂಸತಿ ಉಳಿಸಿಕೊಳ್ಳುವ ಜತೆಗೆ ಆಧುನಿಕತೆ, ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆ. ಹಿಂದೆ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸ್ಥಿರವಾದ ನೆಲೆ ಇರಲಿಲ್ಲ. ಈಗ ಸ್ಥಿರವಾಗಿ ನಿಂತಿದ್ದಾರೆ. 2011ರ ಜನಗಣತಿ ಪ್ರಕಾರ ಅನೇಕ ಅಲೆಮಾರಿ ಜನರ ಜಾತಿ ಗೊತ್ತಿರಲಿಲ್ಲ. ಅವರ ವಿಶೇಷತೆ ತಿಳಿಯಬೇಕಾದರೆ ಸಂಶೋಧನೆ ನಡೆಯಬೇಕು. ಭಾಷೆ, ಸಂಸತಿಗೆ ಸಂಬಂಧಿಸಿದಂತೆ ಹೆಚ್ಚು ಕೃತಿಗಳು ಬರಬೇಕು ಎಂದು ಹೇಳಿದರು.ಕೊಳ್ಳ ಕಾದಂಬರಿಯು ಬಂಜಾರ ಸಂಸತಿಯ ಸೃಜನಶೀಲ ಕೋಶವಾಗಿದ್ದು, ಲೇಖಕ ಡಾ.ಕೆ.ಬಿ. ಪವಾರ ಅವರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೃತಿ ಕೊಟ್ಟಿದ್ದಾರೆ ಎಂದು ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.

ಭಾಷಾ ಅಕಾಡೆಮಿ ಅಧ್ಯ ಡಾ.ಎ.ಆರ್​.ಗೋವಿಂದಸ್ವಾಮಿ, ಲೇಖಕ ಆರ್​.ಜಿ.ಹಳ್ಳಿ ನಾಗರಾಜ, ಅನುವಾದಕ ಪೊ. ಧರಣೇಂದ್ರ ಕುರಕುರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net