ಪ್ರತಿಯೊಬ್ಬರಲ್ಲೂ ಧಾರ್ಮಿಕ ಭಾವನೆ ಬೆಳೆಯಲಿ

Let religious sentiment develop in everyone.
ವಿಶ್ವಹಿಂದು ಪರಿಷತ್ ವತಿಯಿಂದ ಗುಳೇದಗುಡ್ಡದಲ್ಲಿ ಶಿವನ ಪೂಜೆ ನೆರವೇರಿತು.
Published on

ಗುಳೇದಗುಡ್ಡ: ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್ ಗುಳೇದಗುಡ್ಡ ಘಟಕದಿಂದ ಸಕಲ ಸಮಾಜದ ಮಾತೆಯರಿಂದ ಶಿವನ ಮೂರ್ತಿಗೆ ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕಿ ಪ್ರಮೀಳಾ ಮುದ್ದಾಪುರ್ ಮಾತನಾಡಿ, ಪ್ರತಿಯೊಬ್ಬರು ಧಾರ್ಮಿಕ ಭಾವನೆ ಬೆಳಸಿಕೊಳ್ಳುವ ಮೂಲಕ ಸಾರ್ಥಕ ಜೀವನ ನಡೆಸಬೇಕು. ತಾಯಿಯರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು ಎಂದರು.

ದಾಮೋದರ ಆಚಾರ್ಯ ಆಶೀರ್ವಚನ ನೀಡಿದರು. ಪದ್ಮಜ ನಿರೇಗಲ್, ಮೀನಾಕ್ಷಿ ಅಂಬೇಕರ್, ರಾಘವೇಂದ್ರ ಬಸ್ಮಿ, ಮಹಾಗುಂಡಪ್ಪ ಅರಕಲಚಿಟ್ಟಿ , ಸಹನಾ, ಬನಶ್ರೀ, ಉಮಾಶಂಕರಿ, ಸ್ವಪ್ನ ಆಚನೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net