ಮನೆ-ಮನೆಯಲ್ಲೂ ರಾಯಣ್ಣ ಹುಟ್ಟಲಿ

17gkk1a
Published on

ಗೋಕಾಕ: ಬ್ರಿಟಿಷರ ದಾಸ್ಯದಿಂದ ದೇಶಮುಕ್ತಗೊಳಿಸಲು ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಂತಹ ಸೇನಾನಿಗಳು ಪ್ರತಿ ಮನೆ ಮನೆಯಲ್ಲಿ ಹುಟ್ಟಬೇಕು. ರಾಯಣ್ಣನನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಬಳೋಬಾಳ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿ, ಕಿತ್ತೂರು ಚನ್ನಮ್ಮನ ಬಲಗೈ ಬಂಟರಾಗಿದ್ದ ರಾಯಣ್ಣನ ಆದರ್ಶ, ಮೌಲ್ಯಗಳು ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿವೆ ಎಂದರು.

ಸ್ವಾತಂತ್ರ್ಯಕ್ಕಾಗಿ ಜೀವವನ್ನೇ ಪಣಕ್ಕಿಟ್ಟ ರಾಯಣ್ಣ ಅಪ್ರತಿಮ ಶೂರ. ಇಂತಹ ಮಹಾನ್ ವ್ಯಕ್ತಿ ಮಾನವಕುಲದ ಆಸ್ತಿಯಾಗಿದ್ದಾರೆ. ಇವರ ಸವಿನೆನಪಿಗಾಗಿ ಬಳೋಬಾಳ ಗ್ರಾಮದಲ್ಲಿ ಹಾಲುಮತ ಸಮುದಾಯದವರು 40 ಲಕ್ಷ ರೂ. ಸಂಗ್ರಹಿಸಿ ರಾಯಣ್ಣನ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಿರುವುದು ಮಾದರಿಯಾಗಿದೆ ಎಂದರು.

ನನ್ನ ಕೋರಿಕೆ ಮೇರೆಗೆ ಪುತ್ಥಳಿ ನಿರ್ಮಾಣಕ್ಕಾಗಿ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜ 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹಾಲಿನ ಮನಸ್ಸು ಹೊಂದಿರುವ ಹಾಲುಮತ ಸಮುದಾಯ ವಿಶ್ವಾಸಕ್ಕೆ ಹೆಸರುವಾಸಿಯಾಗಿದೆ ಎಂದರು.

4 ಲಕ್ಷ ರೂ ದೇಣಿಗೆ: ಸಂಗೊಳ್ಳಿ ರಾಯಣ್ಣನ ಪುತ್ಥಳಿ ನಿರ್ಮಾಣಕ್ಕೆ 4 ಲಕ್ಷ ರೂ. ದೇಣಿಗೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ವಿವಿಧ ಶ್ರೀಗಳು ಹಾಗೂ ಹಾಲುಮತ ಸಮುದಾಯದವರು ಸನ್ಮಾನಿಸಿದರು. ಅರಬಾವಿ ದುರದುಂಡೀಶ್ವರ ಮಠದ ಗುರು ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಹುಲಜಂತಿಯ ಮಾಳಿಂಗರಾಯ ಮಹಾರಾಜರು, ಹಡಗಿನಾಳದ ಮುತ್ತೇಶ್ವರ ಸ್ವಾಮೀಜಿ, ಜೋಕಾನಟ್ಟಿಯ ಬಿಳಿಯಾನ ಸಿದ್ಧ ಸ್ವಾಮೀಜಿ, ಯಾದವಾಡದ ಸಿದ್ಧೇಶ್ವರ ಸ್ವಾಮೀಜಿ, ಸದಾಶಿವ ಹಿರೇಮಠ, ಮುಖಂಡರಾದ ವಿನೋದ ಪೂಜೇರಿ, ಭೀಮಪ್ಪ ಕಲ್ಲೊಳ್ಳಿ, ಮುತ್ತೆಪ್ಪ ಕುಳ್ಳೂರ, ಪ್ರಧಾನಿ ಕಳಸಣ್ಣವರ, ಸಿದ್ದಲಿಂಗಪ್ಪ ಕಂಬಳಿ, ಲಕ್ಷ್ಮಣ ಗಣಪ್ಪಗೋಳ, ಲಕ್ಷ್ಮಣ ಮಸಗುಪ್ಪಿ, ಗುರುಸಿದ್ಧ ಪೂಜೇರಿ, ಗುರುಸಿದ್ಧ ವಡೇರ, ಬಸಲಿಂಗ ತೆಳಗಡೆ, ಲಗಮಣ್ಣ ಕಳಸಣ್ಣವರ, ಬಸು ಪೋಟಿ, ರಾಮಪ್ಪ ದುರ್ಗಿ, ಲಕ್ಷ್ಮಣ ದುರ್ಗಿ, ವಿಠ್ಠಲ ಸುಣಧೋಳಿ, ಮಾರುತಿ ಕಾಡಗಿ, ವಿಠ್ಠಲ ಕಾಡಗಿ, ಮಾರುತಿ ಪೂಜೇರಿ, ಸೋಮನಿಂಗ ಕಾಡಗಿ, ಸುನೀಲ ಈರೇಶನವರ, ಗುರುಸಿದ್ದಪ್ಪ ದುರ್ಗಿ, ದೇವಪ್ಪ ಕರಿಗಾರ, ಶ್ರೀಕಾಂತ ಕಾಡಗಿ, ಹಾಲಪ್ಪ ರಾಮಗಾನಟ್ಟಿ, ಬಸಪ್ಪ ತಪಸಿ, ಸಿದ್ದಪ್ಪ ಆಡಿನ, ಸಿದ್ದಪ್ಪ ಘೋಡಗೇರಿ, ರಾಮಲಿಂಗ ಸನದಿ, ಶ್ರೀಶೈಲ ಬೆಳವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net