ರಾಜಟ್ಟ ವಿಶ್ವ ಪಾರಂಪರಿಕ ತಾಣವಾಗಲಿ

29_08_2025_BGR_RURAL_PAGE_5
ರಾಜಟ್ಟದಲ್ಲಿ ನಡೆಯಲಿರುವ ಬೌದ್ಧ ನೆಲೆಯ ಉತ್ಖನನದ ಬಗ್ಗೆ ಬುದ್ಧನ ಅನುಯಾಯಿಗಳು, ಸಾಹಿತಿಗಳು, ಪತ್ರಕರ್ತರು ಹಾಗೂ ಸಂಶೋಧಕರ ಸಭೆ ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ನಡೆಯಿತು. ಬೌದ್ಧ ಸೊಸೈಟಿಯ ನ್ಯಾನಲೋಕ ಬಂತೇಜಿ, ಮುಖಂಡರಾದ ಗೋಪಾಲಕೃಷ್ಣ, ಮಾ.ಮುನಿರಾಜು, ಕಂಟನಕುಂಟೆ ಕೃಷ್ಣಮೂರ್ತಿ, ರಾಜಗೋಪಾಲ್​, ಗೂಳ್ಯಹನುಮಣ್ಣ, ಮಾಳವ ನಾರಾಯಣ, ಡಾ.ಪ್ರಕಾಶ್​ ಮಂಟೇದ, ಡಾ.ಸತೀಶ್​, ರಮೇಶ್​ ಸಂಕ್ರಾಂತಿ, ಕೆ.ಎಚ್​.ರಾಜೇಂದ್ರ, ವಕೀಲ ಸಿದ್ದಾರ್ಥ, ಅಶೋಕ, ಕರೀಂಸೊಣ್ಣೆನಹಳ್ಳಿ ಮುನಿಯಪ್ಪ, ರಾಜಟ್ಟ ಹೋಬಳೇಶ್​ ಮೊದಲಾದವರು ಇದ್ದರು.
Published on

ದೊಡ್ಡಬಳ್ಳಾಪುರ : ತಾಲೂಕಿನ ರಾಜಟ್ಟವು ವಿಶ್ವ ಪಾರಂಪರಿಕ ಪಟ್ಟಿಗೆ ಸೇರುವ ಎಲ್ಲ ಅರ್ಹತೆ ಹೊಂದಿದೆ ಎಂದು ಹಿರಿಯ ಸಾಹಿತಿಯೂ ಆದ ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್​.ಹನುಮಂತಯ್ಯ ಅಭಿಪ್ರಾಯಪಟ್ಟರು. ರಾಜಟ್ಟದಲ್ಲಿ ನಡೆಯಲಿರುವ ಬೌದ್ಧ ನೆಲೆಯ ಉತ್ಖನನದ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜಟ್ಟದಲ್ಲಿ ಉತ್ಖನನ ನಡೆದ ಇಪ್ಪತ್ತು ವರ್ಷಗಳ ನಂತರ ನಾವು ಮತ್ತೆ ಎಚ್ಚೆತ್ತಿದ್ದೇವೆ. ಉತ್ಖನನದ ರೂವಾರಿಗಳಾದ ಮೈಸೂರಿನ ಪ್ರೊ.ಕೃಷ್ಣಮೂರ್ತಿ ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಈಗ ಮಳೆಗಾಲವಾದ್ದರಿಂದ ಉತ್ಖನನ ಸ್ಥಗಿತವಾಗಿದೆ. ಎರಡೂವರೆ ಸಾವಿರ ವರ್ಷಗಳ ಹಿಂದಿನ ಬೌದ್ಧ ನೆಲೆ ಇದಾಗಿದ್ದು, ಇಲ್ಲಿನ ಅವಶೇಷಗಳನ್ನು ಪರಿಶೀಲಿಸಿದರೆ ಗ್ರೀಕ್​ ನಾಗರಿಕತೆ ನೆನಪಿಸುತ್ತದೆ. ಬೌದ್ಧ ಧಮ್ಮ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗಿನ ಕುರುಹುಗಳನ್ನು ಕಾಣಬಹುದಾಗಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ. ಉತ್ಖನನ ಮುಂದುವರಿಸಲು ಬೌದ್ಧ ಅವಶೇಷಗಳು ಎಷ್ಟು ಎಕರೆ ಪ್ರದೇಶದಲ್ಲಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಬೇಕು. ಅಂದಾಜಿನ ಪ್ರಕಾರ ಸುಮಾರು ನೂರು ಎಕರೆ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರಬಹುದು ಎಂಬ ಮಾಹಿತಿ ಇದೆ. ಈ ಸ್ಥಳದಲ್ಲಿ ಮಹಾಬೋಧಿ ಸೊಸೈಟಿ ಜೋಡಿಸಬೇಕು ಎಂದು ತಿಳಿಸಿದರು.

ಮ್ಯೂಸಿಯಂ ಸ್ಥಾಪನೆಗೆ ಒತ್ತಾಯ: ಈ ಹಿಂದೆ 2002ರಲ್ಲಿ ನಡೆಸಿದ ಉತ್ಖನನದಲ್ಲಿ ದೊರೆತ ವಸ್ತುಗಳನ್ನು ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಇಡಲಾಗಿದೆ. ಅದನ್ನು ತಂದು ಇಲ್ಲಿ ವಸ್ತು ಸಂಗ್ರಹಾಲಯ ಮಾಡಬೇಕು. ಈ ಹಿಂದೆ ರೈತರು ಬೂದಿ ಹಳ್ಳದಿಂದ ಬೂದಿ ತೆಗೆಯುವಾಗ ಸಿಕ್ಕ ಕೆಲವು ವಸ್ತುಗಳನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಂಡಿರುವ ಮಾಹಿತಿ ಇದೆ. ಸರ್ಕಾರ ಮ್ಯೂಸಿಯಂ ಮಾಡಿದರೆ ರೈತರು ತಮ್ಮ ಬಳಿ ಇರುವ ವಸ್ತುಗಳನ್ನು ತಂದು ಇಡುತ್ತಾರೆ. ಉತ್ಖನನ ಮಾಡಿದ ಸ್ಥಳವನ್ನು ಸಾರ್ವಜನಿಕರ ವೀಕ್ಷಣೆಗೆ ಅನುಮತಿಸಬೇಕು. ಹಾಗೆ ಮಾಡಿದರೆ ರಾಜಟ್ಟ ಭಾರತದ ಭೂಪಟದಲ್ಲಿ ಮುಖ್ಯ ಸ್ಥಾನವಾಗುತ್ತದೆ ಡಾ.ಎಲ್​.ಹನುಮಂತಯ್ಯ ಎಂದರು.

ರಾಜಟ್ಟ ಬೌದ್ಧ ಸ್ಮಾರಕ ಸಮಿತಿಗೆ ಸಂಚಾಲಕರಾಗಿ ಕೆ.ಎಚ್​.ರಾಜೇಂದ್ರ, ಡಾ.ಪ್ರಕಾಶ್​ ಮಂಟೇದ ಮತ್ತು ರಾಜುಸಣ್ಣಕ್ಕಿ ಹಾಗೂ ಸಂಶೋಧಕ ಡಾ. ವೆಂಕಟೇಶ್​ ನೇಮಕ ಮಾಡಲಾಯಿತು.

6 ತಿಂಗಳಲ್ಲಿ ನಿರ್ಮಿಸಿ : ರಾಜಟ್ಟ 4, 5ನೇ ಶತಮಾನದಲ್ಲೇ ಅಂತಾರಾಷ್ಟಿ$ಯ ಬೌದ್ಧ ಕೇಂದ್ರವಾಗಿತ್ತು. ಬೌದ್ಧ ಧಮ್ಮ ಪ್ರಚಾರಕ್ಕೆ ಬಿಕ್ಕುಗಳು ರಾಜಟ್ಟದಿಂದ ಹೋಗುತ್ತಿದ್ದರು. ಮಂಟೇಸ್ವಾಮಿ ಅಲ್ಲಮನ ಪ್ರತಿರೂಪವಾಗಿದ್ದು, ಬುದ್ಧನ ಮುಂದುವರಿದ ರೂಪವಾಗಿದೆ. ಹಾಗಾಗಿ ಗತಿಸಿರುವ ಇತಿಹಾಸವನ್ನು ಮರುಕಳಿಸುವ ಕೆಲಸವನ್ನ ನಾವು ಮಾಡಬೇಕಿದೆ. ಆದ್ದರಿಂದ ಇಂತಹ ನ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಿದೆ. ರಾಜಟ್ಟ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಹಾಗೂ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು. ಬುದ್ಧನ ವಿಷಯದಲ್ಲಿ ಯಾವ ಗುಂಪುಗಾರಿಕೆ, ಜಾತಿ, ಧರ್ಮದ ತಾರತಮ್ಯ ಮಾಡಬಾರದು. ಬುದ್ಧನ ತತ್ವ ಅರಿತು ಜಾತಿ, ಧರ್ಮದ ಎಲ್ಲೆ ಮೀರಿ ಮನುಷ್ಯರಾಗೋಣ. ಮುಂದಿನ 6 ತಿಂಗಳಲ್ಲಿ ಮ್ಯೂಸಿಯಂ ಮಾಡಬೇಕು, ಒಂದು ವರ್ಷದಲ್ಲಿ ರಾಜಟ್ಟ ವಿಶ್ವ ಮಟ್ಟದಲ್ಲಿ ರಾರಾಜಿಸಬೇಕು. ಈ ಕೆಲಸ ಸಾಧಿಸಲು ಸದ್ಯಕ್ಕೆ 20&30 ಎಕರೆ ಸರ್ಕಾರಿ ಭೂಮಿ ಬೇಕು ಎಂದು ಹಿರಿಯ ಸಾಹಿತಿ ಪ್ರೊ.ಎಚ್​.ಗೋವಿಂದಯ್ಯ ಅಭಿಪ್ರಾಯಪಟ್ಟರು.

ರೈತರಿಗೆ ನ್ಯಾಯ ಒದಗಿಸಲು ಕ್ರಮ : ಉತ್ಖನನದ ಉದ್ದೇಶದಿಂದ ರೈತರನ್ನು ಬೀದಿಪಾಲು ಮಾಡಲು ಸಾಧ್ಯವಿಲ್ಲ, ಸರ್ಕಾರ ಕಾರ್ಖಾನೆಯ ಉದ್ದೇಶಕ್ಕೆ ಭೂ ಸ್ವಾಧಿನ ಮಾಡಿಕೊಂಡಂತೆ ಬೌದ್ಧ ನೆಲೆಗೆ ಭೂಮಿಯನ್ನು ಖರೀದಿ ಮಾಡಬೇಕು. ಸರ್ಕಾರ ರೈತರಿಗೆ ಪರ್ಯಾಯ ಭೂಮಿ ನೀಡಿ ಸೂಕ್ತ ಪರಿಹಾರ ನೀಡಬೇಕು. ರಾಜಟ್ಟದ ಸುತ್ತ ಸರ್ಕಾರಿ ಭೂಮಿ ಇದ್ದರೆ ಅದನ್ನ ರಕ್ಷಣೆ ಮಾಡಬೇಕು. ಇದು ಪವಿತ್ರ ಬೌದ್ಧನೆಲೆಯಾಗಿರುವ ಕಾರಣ ಈ ಸ್ಥಳವನ್ನು ಉಳಿಸಕೊಂಡು ರಾಜಟ್ಟವನ್ನು ಒಂದು ಅಂತಾರಾಷ್ಟಿ$ಯ ಬುದ್ಧಿಸ್ಟ್​ ಸೆಂಟರ್​ ಮಾಡಬೇಕಿದೆ ಡಾ.ಎಲ್​.ಹನುಮಂತಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net