

ಎಂ.ಎನ್ಕೋಟೆ: ಕೆ.ಎನ್.ರಾಜಣ್ಣ ಅವರನ್ನು ರಾಜ್ಯ ಸರ್ಕಾರ ಸಚಿವ ಸಂಪುಟದಿಂದ ವಜಾ ಮಾಡಿರುವುದು ಇಡೀ ವಾಲ್ಮೀಕಿ ಜನಾಂಗಕ್ಕೆ ಅಪಮಾನ ಮಾಡಿದಂತಾಗಿದೆ. ತಣ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ರೈತ ಮುಖಂಡ ಹಾಗಲವಾಡಿ ಶಂಕರ್ ಒತ್ತಾಯಿಸಿದರು.
ಗುಬ್ಬಿ ತಾಲೂಕಿನ ಹಾಗಲವಾಡಿಯಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಣ್ಣ ಅವರು ಸತ್ಯ ಹೇಳಿದ್ದಕ್ಕೆ ರಾಜ್ಯ ಸರ್ಕರ ವಜಾ ಮಾಡಿದೆ. ನೇರವಾಗಿ ಮಾತನಾಡುವುದು ರಾಜಣ್ಣ ಗುಣ. ಇದರ ಹಿಂದೆ ಕೆಲವರ ಪಿತೂರಿ ಇದೆ. ವಾಲ್ಮೀಕಿ ಸಮಾಜವನ್ನು ತುಳಿಯುವ ಹುನ್ನಾರ ನಡೆದಿದೆ. ಈ ಹಿಂದೆ ಬಳ್ಳಾರಿ ನಾಗೇಂದ್ರ, ಈಗ ಕೆ.ಎನ್.ರಾಜಣ್ಣ ಅವರನ್ನು ರಾಜಕೀಯವಾಗಿ ತುಳಿಯಲಾಗಿದೆ ಎಂದು ಆರೋಪಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನಗಳಿಸಲು ಕೆಎನ್ಆರ್ ಕೊಡುಗೆ ಇದೆ. ಸರ್ಕಾರದ ಅನೇಕ ಯೋಜನೆಗಳಿಗೆ ಪ್ರೇರಣೆಯಾಗಿರುವ ಪ್ರಭಾವಿ ನಾಯಕ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ತೆಗೆದಿರುವುದು ಖಂಡನೀಯ ಎಂದರು.
ರೈತ ಮುಖಂಡ ಶಿವರಾಜು, ವಾಲ್ಮೀಕಿ ಸಮಾಜದ ಮುಖಂಡ ಸಾಗಸಂದ್ರ ದೇವರಾಜು ಇದ್ದರು.