

ಚಳ್ಳಕೆರೆ: ಗಣಪತಿ ಉತ್ಸವಗಳು ಸಾಮಾಜಿಕ ್ಜಅಗೃತಿಗೆ ಆಧಾರ ಆಗಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ನಗರದ ಗಾಂಧಿನಗರ ಪಾರ್ಕ್ ಆವರಣದಲ್ಲಿ ಸ್ಥಾಪನೆ ಮಾಡಲಾಗಿರುವ ಸರ್ವಧರ್ಮ ಗಣಪತಿ ಪೂಜಾ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು.
ಗಣಪತಿ ಉತ್ಸವಗಳಲ್ಲಿ ಯುವ ಸಮುದಾಯ ಪಾಲ್ಗೊಳ್ಳುವ ಆಸಕ್ತಿ ಹೆಚ್ಚು ಕಾಣುತ್ತೇವೆ. ಇದರಿಂದ ಸಮಾಜದ ಜವಾಬ್ದಾರಿ ಜಾಗೃತಿ ಆಗಬೇಕು. ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಸಮಾಜವನ್ನು ಪ್ರಗತಿಪರ ಬೆಳವಣಿಗೆಯತ್ತ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ನಗರಸಭಾ ಸದಸ್ಯ ಹೊಯ್ಸಳ ಗೋವಿಂದ ಮಾತನಾಡಿ, ಅಂದಾಜು 20 ವರ್ಷಗಳಿಂದ ಸರ್ವಧರ್ಮ ಗಣಪತಿ ಉತ್ಸವ ಆಚರಣೆ ಮಾಡುತ್ತಿದ್ದೇವೆ. ನಗರದ ಮುಸ್ಲಿಮರ ಸಹಭಾಗಿತ್ವದಲ್ಲಿ ಆಚರಿಸುವ ಉತ್ಸವ ಸಮಾನತೆಯ ಸಂಕೇತವಾಗಿ ಆಚರಿಸುತ್ತಿದ್ದೇವೆ ಎಂದರು.