ಪುನರಾಯ್ಕೆಯಾಗಲಿ ಪ್ರಧಾನಿ ಮೋದಿ

12ANG1 SULIBELE
Published on

ಅಣ್ಣಿಗೇರಿ: ನಮ್ಮ ದೇಶವು ಮತ್ತಷ್ಟು ಬಲಿಷ್ಠಗೊಳ್ಳಬೇಕಾದರೆ ಮತ್ತೊಮ್ಮೆ ಮೋದಿಜೀ ಅವರನ್ನು ಆಯ್ಕೆ ಮಾಡಬೇಕು. ಜತೆಗೆ ಅವರು ಮಾಡಿದಂತಹ ಸಾಧನೆಗಳನ್ನು ಜನರಿಗೆ ಮನ ಮುಟ್ಟಿಸುವ ಕೆಲಸ ಮಾಡಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.

ಪಟ್ಟಣಕ್ಕೆ ಜನಗಣ ಮನ ಬೆಸೆಯೋಣ ಎಂಬ ಅಜೆಂಡಾದೊಂದಿಗೆ ಬೈಕ್ ಜಾಗೃತಿ ರ್ಯಾಲಿಯಲ್ಲಿ ಅವರು ಮಾತನಾಡಿದರು. ದೇಶಕ್ಕೆ ಯಾವುದೇ ಅಪಾಯ ಬರದಂತೆ ಪ್ರಧಾನಮಂತ್ರಿ ಮೋದಿಜೀ ಆಡಳಿತ ನಡೆಸುತ್ತಿದ್ದಾರೆ. ಅಲ್ಲದೆ, ಶತ್ರು ರಾಷ್ಟ್ರಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಅವರಲ್ಲಿದೆ. ಹೀಗಾಗಿ ನಾವೆಲ್ಲರೂ ಸೇರಿ ಜನಗಣಮನ ಬೆಸೆಯೋಣ ಬೆಳೆಸೋಣ, ಉತ್ತಮ ರಾಷ್ಟ್ರ ಕಟ್ಟೋಣ ಎಂದರು.

ಬಳಿಕ ಪಟ್ಟಣದಲ್ಲಿ ಆಯೋಜಿಸಿದ್ದ ಬೈಕ್ ರಾಲಿ ಮೂಲಕ ಆಗಮಿಸಿದ ಸೂಲಿಬೆಲೆ, ಅಂಬಿಗೇರಿ ಕ್ರಾಸ್​ನಲ್ಲಿರುವ ಡಾ ಬಿ.ಆರ್. ಅಂಬೇಡ್ಕರ್ ಮೂರ್ತಿ, ಸ್ವಾಮಿ ವಿವೇಕಾನಂದ ವೃತ್ತದಲ್ಲಿ ವಿವೇಕಾನಂದರ ಭಾವಚಿತ್ರ ಹಾಗೂ ಮಾರ್ಕೆಟ್​ನಲ್ಲಿರುವ ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಸ್ಥಳೀಯ ಬಿಜೆಪಿ ನಾಯಕರು ಹಾಗೂ ಯುವಕರು ಬೈಕ್ ರ‍್ಯಾಲಿ ನಡೆಸಿ ಅವರಿಗೆ ಸಾಥ್ ನೀಡಿದರು.

ಷಣ್ಮುಖ ಗುರಿಕಾರ, ಈಶಪ್ಪ ಹೊಂಬಳ, ವಿಜಯ ಕಂಬಿಮಠ, ರಾಘವೇಂದ್ರ ರಾಮಗಿರಿ, ಮುತ್ತು ಸೂಡಿ, ವಡಕಪ್ಪ ಯಳವತ್ತಿ, ಅರ್ಜುನ್ ಕಲಾಲ, ಶಿವಾನಂದ ಹಾಳದೋಟರ, ಭರತೇಶ ಜೈನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net