

ತರೀಕೆರೆ: ರಾಜಕಾರಣ ಧರ್ಮಾತೀತವಾಗಿರಬೇಕು ಎಂದು ಶ್ರೀ ಪ್ರಸನ್ನನಾಂದಪುರಿ ಸ್ವಾಮೀಜಿ ಎಂದು ಹೇಳಿದರು.
ಅಜ್ಜಂಪುರ ತಾಲೂಕಿನ ಕೆ.ಗೊಲ್ಲರಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀಗಾದ್ರಿ ಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ಕೆಪ್ಪ ಚೌಡೇಶ್ವರಿ ದೇವಿಯ ನೂತನ ದೇಗುಲ ಲೋಕಾರ್ಪಣೆಗೊಳಿಸಿ ನಂತರ ನಡೆದ ಧಾರ್ಮಿಕ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಸೌರ್ಹಾದತೆ, ಸಮನ್ವಯತೆಯಿಂದ ಜೀವನ ನಡೆಸಿದರೆ, ಶಾಂತಿ, ನೆಮ್ಮದಿ ಜತೆ ಬದುಕು ಸುಂದರವಾಗಲಿದೆ. ಕೆ.ಗೊಲ್ಲರಹಳ್ಳಿ ಗ್ರಾಮದಲ್ಲಿ ಈ ರೀತಿಯ ವಾತಾವರಣ ಗೋಚರಿಸುತ್ತಿದ್ದು, ಭಗವಂತ ಎಲ್ಲರಿಗೂ ಒಳಿತು ಮಾಡುತ್ತಾನೆ ಎಂದರು.
ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಶಾಂತಿ, ನೆಮ್ಮದಿಗಾಗಿ ದೇಗುಲಗಳ ನಿರ್ಮಾಣ ಪೂರಕವಾದರೆ, ಜ್ಞಾನ ವೃದ್ಧಿಗಾಗಿ ಶಾಲೆಗಳನ್ನು ಕಟ್ಟುವ ಕಾರ್ಯವಾಗಬೇಕು. ಧರ್ಮದ ಮಧ್ಯೆ ಸಾಮರಸ್ಯ ಇದ್ದರೆ ಶಾಂತಿ ಭಂಗವಾಗುವುದಿಲ್ಲ ಎಂದು ಹೇಳಿದರು.
ಕೆಪಿಸಿಸಿ ಮಾಜಿ ಸದಸ್ಯ ಗೊಲ್ಲರಹಳ್ಳಿ ರಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಾರೂಕ್, ಗ್ರಾಪಂ ಅಧ್ಯಕ್ಷೆ ರಾಜಮ್ಮ, ಮತ್ತಿತರರಿದ್ದರು.