ಕವಿಗಳು ಬಹುತ್ವದ ನೆಲೆಯಲ್ಲಿ ದೇಶ ಕಟ್ಟಲಿ

22dvk 5
Published on

ಬೆಳಗಾವಿ: ಪ್ರಜಾಪ್ರಭುತ್ವದ ಉದ್ದೇಶ ಗಟ್ಟಿಗೊಳಿಸಲು ಓದು&ಬರಹ ಸಾಗಬೇಕಿದೆ. ಸಂವಿಧಾನದ ಆಶಯ ಹಾಗೂ ಬುದ್ಧ , ಬಸವ, ಗಾಂಧಿ, ಅಂಬೇಡ್ಕರ್​ ಮೌಲ್ಯ ಎತ್ತಿಹಿಡಿಯುವ ಕಾವ್ಯ ರಚಿಸುವ ಮೂಲಕ, ದೇಶವನ್ನು ಬಹುತ್ವದ ನೆಲೆಯಲ್ಲಿ ಕಟ್ಟಿಕೊಡುವ ಜವಾಬ್ದಾರಿ ಯುವಕವಿಗಳು ನಿಭಾಯಿಸಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್​.ಎನ್​. ಮುಕುಂದರಾಜ ಹೇಳಿದರು.

ನಗರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಭವನದಿಂದ ಸೋಮವಾರ ಆಯೋಜಿಸಿದ್ದ ಕಿತ್ತೂರು ಕರ್ನಾಟಕ ಬೆಳಗಾವಿ ವಲಯಮಟ್ಟದ ಯುವ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಬಡವರ ಬದುಕು ಚಿಂತಾಜನಕವಾಗಿದ್ದು, ಸಾಹಿತಿಗಳಾದವರು ಕಾವ್ಯಗಳ ಮೂಲಕ ಆಳುವ ವರ್ಗ, ಅಧಿಕಾರಿಗಳನ್ನು ಸದಾ ಪ್ರಶ್ನಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಭವನದ ನಿರ್ದೇಶಕ ಡಾ.ಬಸವರಾಜ ಜಗಜಂಪಿ ಮಾತನಾಡಿ, ದ.ರಾ. ಬೇಂದ್ರೆ ಸಾಹಿತ್ಯಿಕ ಗುಣ, ಕುವೆಂಪು ಕ್ರಾಂತಿಗೀತೆಗಳು ಮತ್ತು ಚಂದ್ರಶೇಖರ ಪಾಟೀಲರ ನಾಡು&ನುಡಿ ಪ್ರೀತಿಯನ್ನು ಯುವಕವಿಗಳು ಮೈಗೂಡಿಕೊಳ್ಳಬೇಕು ಎಂದರು. ಅಕಾಡೆಮಿ ಸದಸ್ಯ ಸಂಚಾಲಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಆಶಯ ಭಾಷಣ ಮಾಡಿದರು. ಯುವಕವಿ ದೇವರಾಜ ಹುಣಸಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. 7 ಜಿಲ್ಲೆಗಳ ಒಟ್ಟು 23 ಯುವ ಕವಿಗಳು ಕವಿತೆ ವಾಚಿಸಿದರು. ಸಾಹಿತಿ ಡಾ.ಹೇಮಾ ಪಟ್ಟಣಶೆಟ್ಟಿ ಕಾವ್ಯ ಅನುಸಂಧಾನ ವಿಷಯವಾಗಿ ಮಾತನಾಡಿದರು.

ಅಕಾಡೆಮಿ ರಿಜಿಸ್ಟ್ರಾರ್​ ಎನ್​. ಕರಿಯಪ್ಪ, ಸದಸ್ಯರಾದ ಡಾ.ಮಲ್ಲಿಕಾರ್ಜುನ ಮಾನ್ಪಡೆ ಮತ್ತು ಮಹದೇವ ಬಸರಕೋಡ, ಭವನದ ಕಾರ್ಯದರ್ಶಿ ಯ.ರು. ಪಾಟೀಲ, ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಅಧ್ಯಕ್ಷ ಡಾ.ವೈ.ಬಿ. ಹಿಮ್ಮಡಿ, ಸಾಹಿತಿಗಳಾದ ಡಾ. ಸರಜೂ ಕಾಟ್ಕರ್​, ಎಂ.ಎಸ್​.ಇಂಚಲ, ನೀಲಗಂಗಾ ಚರಂತಿಮಠ, ಡಾ. ನಿರ್ಮಲಾ ಬಟ್ಟಲ, ವಿಜಯ ಬಡಿಗೇರ, ಬಸವರಾಜ ಗಾರ್ಗಿ, ಪ್ರಿಯಾಂಕಾ ಅನಗೋಳಕರ, ಪೂಜಾ ದೊಡ್ಡಬೊಮ್ಮನ್ನವರ, ಸುಮಾ ಹವಾಲ್ದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net