ಪಿಎಲ್​ಡಿ ಬ್ಯಾಂಕ್ ಇನ್ನಷ್ಟು ಅನುಕೂಲ ಕಲ್ಪಿಸಲಿ

PLD BANK
Published on

ಹಿರೇಕೆರೂರ: ಸಹಕಾರ ಕ್ಷೇತ್ರ ರೈತರಿಗೆ ಕಾಮಧೇನು ಇದ್ದಂತೆ. ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಹಿರಿಯರ ಆಶಯ ಈಡೇರುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿನ ಪಿಎಲ್​ಡಿ ಬ್ಯಾಂಕ್ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಿ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಬೇಕು. ಈಗಾಗಲೇ ರಟ್ಟಿಹಳ್ಳಿಯಲ್ಲಿ ಪಿಎಲ್​ಡಿ ಬ್ಯಾಂಕ್ ಕಾರ್ಯಾರಂಭಿಸಿದ್ದು, ರಟ್ಟಿಹಳ್ಳಿ ತಾಲೂಕು ವ್ಯಾಪ್ತಿಯ ಷೇರುದಾರರನ್ನು ಆ ಬ್ಯಾಂಕ್​ಗೆ ಸೇರಿಸುವ ಕಾರ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ಪುಟ್ಟಪ್ಪಗೌಡ್ರ ಮಾತನಾಡಿ, ಬ್ಯಾಂಕ್​ನ ಒಟ್ಟು ಷೇರು ಬಂಡವಾಳ 248.31 ಲಕ್ಷ ರೂ., ಕಾಯ್ದಿರಿಸಿದ ನಿಧಿ 49.37 ಲಕ್ಷ ರೂ., ಇತರ ನಿಧಿ 224.96 ಲಕ್ಷ ರೂ. ಇದೆ. ಬ್ಯಾಂಕ್ ದೀರ್ಘಾವಧಿ ಸಾಲ 920.55 ಲಕ್ಷ ರೂ.ಗಳಾಗಿದ್ದು, ವರದಿ ವರ್ಷದಲ್ಲಿ 167.43 ಲಕ್ಷ ರೂ. ಸಾಲ ನೀಡಲಾಗಿದೆ. ಒಟ್ಟಾರೆ ಶೇ.76.05 ಸಾಲ ವಸೂಲಾತಿಯಾಗಿದ್ದು, 19.52 ಲಕ್ಷ ರೂ. ಲಾಭ ಹೊಂದಿದೆ ಎಂದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಭೀಮಪ್ಪ ದೊಡ್ಡಗೌಡ್ರ, ವ್ಯವಸ್ಥಾಪಕ ಕರಬಸಪ್ಪ ಭಜಂತ್ರಿ, ನಿರ್ದೇಶಕರಾದ ಮಂಜಪ್ಪ ಗಿಡ್ಡಣ್ಣನವರ, ಗಣೇಶಗೌಡ ಪಾಟೀಲ, ಜಗದೀಶ ಕಡೇಮನಿ, ಸುಶೀಲಾ ಕಾರಗಿ, ಆನಂದಪ್ಪ ಹಾದಿಮನಿ, ಸಂತೋಷ ಬಾಸೂರ, ಕರಿಯಪ್ಪ ದೊಡ್ಡಕ್ಕನವರ, ತ್ಯಾಗರಾಜ ಹರಿಜನ, ಬ್ಯಾಂಕ್ ಸಿಬ್ಬಂದಿ ಜಯಮ್ಮ ಕೋರಿ, ಶಂಕರ್ ರ್ಬಾ, ಜಾವೀದ್ ಜಮಖಾನಿ, ಮಲ್ಲನಗೌಡ ಹನುಮಂತಗೌಡ್ರ, ಪವಿತ್ರಾ ಶಿರಸಂಗಿ, ಮೋಹನ ಜಾಲಿಮರದ, ಇತರರಿದ್ದರು. ನಿರ್ದೇಶಕರಾದ ಷಣ್ಮುಖಯ್ಯ ಮಳಿಮಠ, ಮಲ್ಲೀಕಾರ್ಜುನ ಬುರಡಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net