ಆಟೋಟ ಜೀವನದ ಭಾಗವಾಗಲಿ

Sports Logo
Published on

ಲಕ್ಷ್ಮೇಶ್ವರ: ಮಕ್ಕಳಿಗೆ ಮೊಬೈಲ್ ನೀಡಿ ಅವರ ಪ್ರತಿಭೆ ಹತ್ತಿಕ್ಕಲಾಗುತ್ತಿದೆ. ಇದರ ಬದಲು ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಹೇಳಿದರು.

ಪಟ್ಟಣದ ಉಮಾವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರ ವತಿಯಿಂದ ಹಮ್ಮಿಕೊಂಡಿದ್ದ ಗ್ರೂಪ್ ಮಟ್ಟದ ಇಲಾಖೆ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು ಎಂದರು.

ಕ್ರೀಡಾ ಜ್ಯೋತಿಯನ್ನು ಈಶ್ವರ ಮೆಡ್ಲೇರಿ ಸ್ವೀಕರಿಸಿ, ದಿಗಂಬರ ಪೂಜಾರ ಕ್ರೀಡಾ ಜ್ಯೋತಿ ಬೆಳಗಿಸಿದರು, ಚಂದ್ರು ನೇಕಾರ ಗುಂಡು ಎಸೆಯುವುದರ ಮೂಲಕ ಕ್ರೀಡೆಗೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಸೋಮಣ್ಣ ಮಾಗಡಿ ಅಧ್ಯಕ್ಷತೆ ವಹಿಸಿದ್ದರು. ಎಲ್.ಎ.ನಡುವಿನಮನಿ, ಬಿ.ಎಂ. ಕುಂಬಾರ, ಸತೀಶ ಬೋಮಲೆ, ಉಮೇಶ್ ನೇಕಾರ, ಡಿ.ಡಿ. ಲಮಾಣಿ, ಎಸ್.ಕೆ. ಹವಾಲ್ದಾರ, ಎನ್.ಪಿ.ಪ್ಯಾಟಿಗೌಡರ, ಆರ್.ಎಂ. ಶಿರಹಟ್ಟಿ, ಆರ್.ಬಿ. ಮಾಂಡ್ರೆ ಇದ್ದರು. ಚನ್ನಪ್ಪ ಜಗಲಿ, ರಮೇಶ ಹಾಳದೋಟದ, ಎಂ.ಎಂ. ಕಳಸೂರ ಪ್ರಾಯೋಜಕತ್ವ ವಹಿಸಿದ್ದರು. ಎಚ್.ಡಿ. ನಿಂಗರೆಡ್ಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net