ಛಾಯಾಗ್ರಾಹಕರು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲಿ

17RAM1
Published on

ರಾಮದುರ್ಗ: ತಾಲೂಕು ವೃತ್ತಿನಿರತ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ಸದಸ್ಯರಿಗೆ ಕಾರ್ಮಿಕ ಕಾರ್ಡ್ ವಿತರಿಸುವ ಸಮಾರಂಭ ಗುರುವಾರ ನೆರವೇರಿತು.

ಮುಖ್ಯಅತಿಥಿಯಾಗಿ ಮಾರುತಿ ಕೋಳೆಕರ ಮಾತನಾಡಿ, ಛಾಯಾಗ್ರಹಕರು ವೃತ್ತಿ ಬದುಕಿನ ಜತೆಗೆ ಸಾಮಾಜಿಕ ಮತ್ತು ಆರ್ಥಿಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದರು.

ಹುಕ್ಕೇರಿ ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಅಪ್ಪು ಹುಕ್ಕೇರಿ ಮಾತನಾಡಿ, ಹೊಸ ಹೊಸ ವಿನ್ಯಾಸ ಹಾಗೂ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ವೃತ್ತಿಯಲ್ಲಿ ಸಾಧನೆ ಮಾಡಬಹುದು ಎಂದರು.

ಗೌರವಾಧ್ಯಕ್ಷ ರಮೇಶ ರಾಯಬಾಗ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಬಸಪ್ಪ ಬಾರ್ಕಿ ಉದ್ಘಾಟಿಸಿದರು. ಸವದತ್ತಿ ತಾಲೂಕಾಧ್ಯಕ್ಷ ಈರಣ್ಣ ಕರಲಿಂಗಣ್ಣವರ, ಉಪಾಧ್ಯಕ್ಷ ಶಿವಾನಂದ ಪಾಟೀಲ, ಕಾರ್ಯದರ್ಶಿ ಬಸವರಾಜ ದಾರೋಜಿ, ಮಾರುತಿ ಬಡಿಗೇರ, ಚಂದ್ರಕಾಂತ ರಾಯಬಾಗ, ವೀರೇಶ ಕಟ್ಟಿಮನಿ, ಕಾರ್ತಿಕ ಗೊಡಚಿ, ಮಹಾಂತೇಶ ಗೋಡಿ, ಮೌನೇಶ ಪತ್ತಾರ, ವೀರೇಶ ಬಳಿಗೇರ, ಬಾಳನಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net