ಅನುದಾನಗಳ ಸದ್ಬಳಕೆ ಬಗ್ಗೆ ಜನರು ಅರಿಯಲಿ

RemasterDirector_1a5c03258
ಪಿರಿಯಾಪಟ್ಟಣ ತಾಲೂಕಿನ ಭುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕ ಪರಿಶೋಧನ ಮತ್ತು ಗ್ರಾಮ ಸಭೆಯಲ್ಲಿ ತಾಪಂ ಲೆಕ್ಕ ಪರಿಶೋಧನ ಸಂಯೋಜಕ ಯೋಗೇಶ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷೆ ಮಮತಾ, ಡಾ.ಸೋಮಯ್ಯ ಇತರರು ಇದ್ದರು.
Published on

ಪಿರಿಯಾಪಟ್ಟಣ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಅನುದಾನ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಲೆಕ್ಕ ಪರಿಶೀಲನಾ ಸಭೆ ಅನಿವಾರ್ಯ ಎಂದು ತಾಲೂಕು ಪಂಚಾಯಿತಿಯ ಲೆಕ್ಕ ಪರಿಶೋಧನಾ ಸಂಯೋಜಕ ಯೋಗೇಶ್ ತಿಳಿಸಿದರು.

ತಾಲೂಕಿನ ಭುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಮತ್ತು ಗ್ರಾಮ ಸಭೆಯಲ್ಲಿ ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರ ಅನುದಾನ ನೀಡಿ ಅನೇಕ ಅಭಿವೃದ್ಧಿ ಯೋಜನೆಗಳು ಜಾರಿಗೊಳಿಸುತ್ತದೆ. ಈ ಅನುದಾನಗಳ ಸದ್ಬಳಕೆಯ ಬಗ್ಗೆ ಸಾರ್ವಜನಿಕರು ಅರಿತುಕೊಳ್ಳಲು ಇಂತಹ ಸಭೆಗಳು ಅನುಕೂಲವಾಗಲಿದೆ ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯರಿಗೆ ನಿಗದಿತ ಕೂಲಿ ನೀಡುವ ಮೂಲಕ ಉದ್ಯೋಗ ಕಲ್ಪಿಸಲಾಗುತ್ತಿದ್ದು ವಿವಿಧ ಇಲಾಖೆಯ ಸಹಕಾರದಿಂದ ಗ್ರಾಮದ ಅಭಿವೃದ್ಧಿಗೆ ಅನುದಾನ ಬಳಕೆಯಾಗುತ್ತದೆ. ಈ ಅನುದಾನಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಹದಿನೈದನೇ ಹಣಕಾಸು ಯೋಜನೆಯಲ್ಲಿ ಒಂಬತ್ತು ಕಾಮಗಾರಿಗಳಿಗೆ 9.72 ಲಕ್ಷ ರೂ, ನರೇಗಾ ಯೋಜನೆಯಡಿ ಒಟ್ಟು 84 ಕಾಮಗಾರಿಗೆ 14.80 ಲಕ್ಷ ರೂ. ಹಾಗೂ ಅನುಷ್ಠಾನ ಇಲಾಖೆಯ ವತಿಯಿಂದ 26 ಕಾಮಗಾರಿಗಳಿಗೆ 10.49 ಲಕ್ಷ ರೂ.ಗಳ ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಗ್ರಾಪಂ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ದೇವರಾಜ್, ರುಕ್ಕಣ್ಣ, ರಮೇಶ್, ಬಸವರಾಜ್, ದೀಪಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಕಾರ್ಯದರ್ಶಿ ಶಿನಾ, ಗ್ರಾಮಸ್ಥರಾದ ವೆಂಕಟೇಶ್, ಸ್ವಾಮಿಗೌಡ, ಕೃಷ್ಣಗೌಡ, ಕೆ.ಸ್ವಾಮಿ, ಮಂಜುಳಾ, ಸವಿತಾ, ಜಯಶೀಲಾ, ಸಹನಾ, ಸುಹಾನ್ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net