ನೈರ್ಮಲ್ಯಯುಕ್ತ ಗ್ರಾಮಕ್ಕೆ ಜನರು ಆದ್ಯತೆ ನೀಡಲಿ

RTL SWACHHATE
Published on

ರಟ್ಟಿಹಳ್ಳಿ: ಆರೋಗ್ಯಕರ, ಸ್ವಚ್ಛ ಸುಂದರ ಗ್ರಾಮ ನಿರ್ವಣಕ್ಕೆ ಗ್ರಾಮಸ್ಥರು ಕೈ ಜೋಡಿಸಬೇಕು. ಆ ಮೂಲಕ ನೈರ್ಮಲ್ಯಯುಕ್ತ ಗ್ರಾಮವನ್ನಾಗಿಸಲು ಪಣ ತೊಡಬೇಕು ಎಂದು ಪಿಡಿಒ ಗುಡ್ಡಪ್ಪ ಗೌಡರ ಹೇಳಿದರು.

ತಾಲೂಕಿನ ಮಾಸೂರು ಗ್ರಾಮದಲ್ಲಿ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದ ಅಂಗವಾಗಿ ನರೇಗಾ ಯೋಜನೆಯಿಂದ ಕೈಗೊಂಡ ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ ಅಭಿಯಾನಕ್ಕೆ ಶ್ರಮದಾನದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ತಾಪಂ ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ ಮಾತನಾಡಿದರು.

ಕುಮದ್ವತಿ ನದಿಯವರೆಗೆ ಜನ ಜಾಗೃತಿ ಜಾಥಾ ನಡೆಸಿ, ನದಿಯ ದಡದಲ್ಲಿರುವ ವರಕವಿ ಸರ್ವಜ್ಞ ಸಮಾಧಿ ಸ್ಥಳದಲ್ಲಿ ಶ್ರಮದಾನ ನಡೆಸಲಾಯಿತು. ಗ್ರಾಪಂ ಅಧ್ಯಕ್ಷೆ ಪ್ರೇಮಿಳಾ ನಡುವಿನಮನಿ, ಉಪಾಧ್ಯಕ್ಷ ರೇಣುಕಪ್ಪ ಸಜ್ಜನಶೆಟ್ಟರ್, ಸದಸ್ಯರಾದ ರಾಜು ಸುಣಗಾರ, ಗಿರೀಶ ಪಾಟೀಲ, ಗ್ರಾಮಸ್ಥರಾದ ಮೋಹನ ನನ್ನೂರಿ, ಮಾಲತೇಶ ಮಾಳಗಿ, ಸಂಜೀವಿನಿ ಒಕ್ಕೂಟದ ಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net