ರಿಯಾಯಿತಿಯಲ್ಲಿ ಜನರಿಗೆ ಚಿಕಿತ್ಸೆ ಲಭಿಸಲಿ

Oplus_131072
Oplus_131072
Published on

ಹುಬ್ಬಳ್ಳಿ: ನರರೋಗ ಸಮಸ್ಯೆ ನಿವಾರಣೆಯಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದಿರುವ ಬಾಲಾಜಿ ಆಸ್ಪತ್ರೆಯು ಇನ್ಮುಂದೆ ನಾರಾಯಣ ಹೆಲ್ತ್ ಸಹಭಾಗಿತ್ವದಲ್ಲಿ ಹೃದ್ರೋಗ ಘಟಕ ಆರಂಭಿಸಿದೆ. ನಾಡಿ ಮಿಡಿತದಂತೆ ಹೃದಯ ಮಿಡಿತದಲ್ಲೂ ಆಸ್ಪತ್ರೆ ಹೆಸರು ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಶುಭ ಹಾರೈಸಿದರು.

ನಗರದ ಬಾಲಾಜಿ ಆಸ್ಪತ್ರೆಯಲ್ಲಿ ನಾರಾಯಣ ಹೆಲ್ತ್ ಸಹಭಾಗಿತ್ವದಲ್ಲಿ ಆರಂಭಿಸಿರುವ ಅತ್ಯಾಧುನಿಕ ಸೌಲಭ್ಯದ ಸುಸಜ್ಜಿತ ಹೃದ್ರೋಗ ಘಟಕವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ ದುಬಾರಿಯಾಗಿರುವ ಹೃದಯ ಶಸ್ತ್ರಚಿಕಿತ್ಸೆಗಳು ರಿಯಾಯಿತಿ ದರದಲ್ಲಿ ಸಿಗುವಂತಾಗಬೇಕು. ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುವಂತಾಗಬೇಕು. ವೈದ್ಯಕೀಯ ಕ್ಷೇತ್ರದ ಸೇವಾ ಹಾದಿಯಲ್ಲಿ ಬಾಲಾಜಿ ಆಸ್ಪತ್ರೆಯು ಇನ್ನಷ್ಟು ಮೈಲಿಗಲ್ಲು ಸಾಧಿಸುವಂತಾಗಲಿ ಎಂದರು.

ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಅಧ್ಯಕ್ಷತೆ ವಹಿಸಿ ಮಾತನಾಡಿ, ನರರೋಗದ ಜತೆಗೆ ಹೃದ್ರೋಗಿಗಳಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಾರಾಯಣ ಹೆಲ್ತ್ ಸಹಭಾಗಿತ್ವ ಮತ್ತು ವೈದ್ಯಕೀಯ ನೆರವಿನೊಂದಿಗೆ ಆರಂಭಿಸಿರುವ ಈ ಹೃದ್ರೋಗ ಘಟಕದಲ್ಲಿ ಸುಸಜ್ಜಿತ ಕ್ಯಾಥಲಾಬ್, ಇಸಿಜಿ, ಇಕೋ, ಟಿಎಂಟಿ ಸೇರಿ ಅನೇಕ ಸೌಲಭ್ಯಗಳಿವೆ. ಹೃದ್ರೋಗ ನಿಯಂತ್ರಣ, ರೋಗ ನಿರ್ಣಯದಿಂದ ಹಿಡಿದು ಸಂಕೀರ್ಣ ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿವರೆಗಿನ ಸಮಗ್ರ ಹೃದ್ರೋಗ ಸೇವೆ ಒದಗಿಸಲು ನಮ್ಮ ಆಸ್ಪತ್ರೆ ಸನ್ನದ್ದವಾಗಿದೆ ಎಂದರು.

ನಾರಾಯಣ ಹೆಲ್ತ್ನ ಕಾರ್ಡಿಯೋಲಜಿ ವಿಭಾಗದ ಮುಖ್ಯಸ್ಥ ಡಾ. ವಿವೇಕಾನಂದ ಗಜಪತಿ, ಹೃದ್ರೋಗ ತಜ್ಞ ಡಾ. ರವಿ ಜೈನಾಪುರ, ಕಾರ್ಡಿಯಾಕ್ ಅರಿವಳಿಕೆ ತಜ್ಞ ಡಾ. ಗಣೇಶ ನಾಯ್ಕ್, ಬಾಲಾಜಿ ಆಸ್ಪತ್ರೆ ವೈದ್ಯರಾದ ಡಾ.ಎನ್. ಆಕಾಶ, ಡಾ. ಅಬೀದ್ ಹುಸೇನ್, ಡಾ. ಜನಮೇಜಯ, ಡಾ. ಆನಂದ ಕೊಪ್ಪದ, ಡಾ. ಇತಿ ಸಿಂಗ್, ಡಾ. ಅಭಯಾಂಬಿಕ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net