ಜನರು ರಸ್ತೆ ವಿಸ್ತರಣೆಗೆ ಸಹಕರಿಸಲಿ

ಕಾನಹೊಸಹಳ್ಳಿಯ ಉಜ್ಜಿನಿ ವೃತ್ತದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ಸಿದ್ದನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ರಜನಿಕಾಂತ್, ಪ್ರಮುಖರಾದ ಕೆ.ಎಂ.ಶಶಿಧರ, ಹುಲಿಕೆರೆ ದುರುಗೇಶ್, ಗ್ರಾಪಂ ಸದಸ್ಯ ನಾಗೇಶ್, ಪಿಡಿಒ ವಿನಯಕುಮಾರ್ ಇತರರಿದ್ದರು.

Published on

ಕಾನಹೊಸಹಳ್ಳಿ: ನಿಗದಿತ ಅವಧಿಯಲ್ಲಿ ಗುಣಮಟ್ಟ ಕಾಮಗಾರಿಯನ್ನು ಮಾಡಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಗ್ರಾಮದಲ್ಲಿ ಶನಿವಾರ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಭಾಗದ ರಸ್ತೆ ನಿರ್ಮಾಣಕ್ಕೆ ಈಗ ಕಾಲಕೂಡಿ ಬಂದಿದೆ. ಉಜ್ಜಿನಿ ವೃತ್ತದಿಂದ ರಂಗನಾಥನಹಳ್ಳಿವರಿಗೆ 6 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ರಸ್ತೆ ವಿಸ್ತರಣೆಗೆ ಸಾರ್ವಜನಿಕರು ಸಹಕರಿಸಬೇಕು. ಕೆಲ ಗುತ್ತಿಗೆದಾರರ ಕಾಮಗಾರಿ ಬಗ್ಗೆ ದೂರು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಯಲುತುಂಬರಗುದ್ದಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿ, ಪ್ರೌಢಶಾಲಾ ಕಾಂಫೌಂಡ್ ಹಾಗೂ ಆಲೂರು ಗ್ರಾಮದಲ್ಲಿ 49.5 ಲಕ್ಷ ರೂ.ವೆಚ್ಚದ ಪಶುಆಸ್ಪತ್ರೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು.

ಗ್ರಾಪಂ ಅಧ್ಯಕ್ಷ ಸಿದ್ದನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ರಜನಿಕಾಂತ್, ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ, ಜಿಪಂ ಎಇಇ ಮಲ್ಲಿಕಾರ್ಜುನ, ಪಿಡಬ್ಲುೃಡಿ ಎಇಇ ನಾಗನಗೌಡ, ಪಿಡಿಒ ವಿನಯಕುಮಾರ್, ಪ್ರಮುಖರಾದ ಬಿ.ಟಿ.ಗುದ್ದಿ ದುರುಗೇಶ್, ಬಣವಿಕಲ್ಲು ಎರ‌್ರಿಸ್ವಾಮಿ, ಜಿ.ಓಬಣ್ಣ, ಅಡವೆಜ್ಜರ ನಾಗೇಶ್, ಡಾ.ಓಂಕಾರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net