

ಬೆಳಗಾವಿ: ಪ್ರಜಾಪ್ರಭುತ್ವದ ಕುರಿತಾಗಿ ಜನರಲ್ಲಿ ಜಾಗೃತಿ, ಸಾಮಾಜಿಕ ಕಳಕಳಿ ಮತ್ತು ರಾಷ್ಟ್ರಿಯ ಪ್ರೆ ಮೂಡಿಸುವುದು ಪತ್ರಿಕೋದ್ಯಮದ ಆದ್ಯ ಗುರಿಯಾಗಿದೆ ಎಂದು ರಂಗಕರ್ಮಿ ಮತ್ತು ಆಕಾಶವಾಣಿಯ ನಿವೃತ್ತ ಹಿರಿಯ ಉದ್ಘೋಷಕ ಡಾ. ಶಶಿಧರ ನರೇಂದ್ರ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಸ್ತುತ ಮಾಧ್ಯಮ ಮತ್ತು ರಾಷ್ಟ್ರ ನಿರ್ಮಾಣ ವಿಷಯದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗದ ಸಂಯೋಜಕಿ ಡಾ.ಸುಷ್ಮಾ. ಆರ್ ಮಾತನಾಡಿ, ವಿದ್ಯಾರ್ಥಿಗಳು ಸದಭಿರುಚಿ ಸಾಹಿತ್ಯ ಮತ್ತು ಪತ್ರಿಕೆಗಳ ಅಂಕಣಗಳ ಓದುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ವಿಭಾಗದ ಬೋಧಕ ಸಹಾಯಕರಾದ ಆನಂದ ತುಳಸಿಕಟ್ಟಿ , ವಿದ್ಯಾಶ್ರೀ ಹಾಲಕೇರಿಮಠ, ಪ್ರೀತಿ ಮಳವಾಡೆ, ಅರುಣ ಹೊಸಮಠ ಇತರರಿದ್ದರು.