ಜನರು ಪರಿಸರ ಮಾಲಿನ್ಯ ತಡೆಯಲು ಜಾಗೃತರಾಗಲಿ

mysore
Published on

ಮೈಸೂರು: ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ವಿಶ್ವಪರಿಸರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.


ಸಂಸ್ಥೆ ನಿರ್ದೇಶಕ ಡಾ.ಎಸ್.ಗಾಂಧಿದಾಸ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪರಿಸರ ಸಂರಕ್ಷಣೆ ಅನಿವಾರ್ಯ ಬಗ್ಗೆ ಪ್ರತಿಯೊಬ್ಬರು ಗಮನ ಹರಿಸಬೇಕು. ಪರಿಸರ ಸ್ನೇಹಿ ಕೃಷಿ ಪದ್ಧತಿಯಿಂದ ಭೂ ಮಾಲಿನ್ಯವನ್ನು ತಡೆಯಬಹುದು. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಹೇಳಿದರು.


ವಿವಿಧ ರೀತಿಯ ಗಿಡಗಳಾದ ಮಹಾಗನಿ, ಅರ್ಜುನ, ಹೊಂಗೆ ಗಿಡ, ಕ್ಯಾಸ್ಟರ್ ಸಸಿಗಳು ಮತ್ತು ಹಿಪ್ಪುನೇರಳೆಯ ಹಣ್ಣಿನ ಸಸಿಗಳನ್ನು ನೆಡಲಾಯಿತು.
ಹಿರಿಯ ವಿಜ್ಞಾನಿ ಡಾ.ಸಿ.ಎಂ.ಬಾಬು, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಡಾ.ಕೆ.ಬಿ.ಚಂದ್ರಶೇಖರ್, ಡಾ.ಎಸ್.ಬಾಲಸರಸ್ವತಿ, ಡಾ.ಆರ್.ಭಾಗ್ಯಾ, ಎಂ.ಎನ್.ಚಂದ್ರಶೇಖರ್ ಹಾಗೂ 150 ವಿಜ್ಞಾನಿಗಳು, ಅಧಿಕಾರಿಗಳು, ಯೋಜನೆಯ ಸಹಾಯಕರು, ಕಾರ್ಮಿಕರು ಭಾಗವಹಿಸಿದ್ದರು.


ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಈಗಾಗಲೇ ದತ್ತು ಪಡೆದಿರುವ ಮೈಸೂರು ಸಮೀಪದ ಗೋಪಾಲಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಸ್ಥೆ ವಿಜ್ಞಾನಿಗಳು, ಶಾಲೆಯ ಶಿಕ್ಷರು, ಸಿಬ್ಬಂದಿ ಮತ್ತು ಶಾಲಾ ಮಕ್ಕಳು ಜತೆಗೂಡಿ ಹಿಪ್ಪುನೇರಳೆಯ ಹಣ್ಣಿನ ಸಸಿಗಳನ್ನು, ವಿವಿಧ ರೀತಿಯ ಹಣ್ಣುಗಳ ಸಸಿಗಳು, ಕಾಡಿನಲ್ಲಿ ಬೆಳೆಸುವಂತಹ ಸಸಿಗಳನ್ನು ನೆಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net