

ಸುರೇಬಾನ: ಮಕ್ಕಳಲ್ಲಿ ದೇಶಪ್ರೇಮ ಬೆಳೆಸಿ ಗ್ರಾಮದ ಪ್ರತಿಯೊಂದು ಮನೆಯಲ್ಲಿ ವೀರಯೋಧರನ್ನು ನಿರ್ಮಿಸುವ ಕೆಲಸ ಆಗಬೇಕು ಎಂದು ಸಂಗಳ ಶಿವಾನಂದ ಮಠದ ಚಿದ್ರೂಪಾನಂದ ಸ್ವಾಮೀಜಿ ಪಾಲಕರಿಗೆ ಕರೆ ನೀಡಿದರು.
ಸಮೀಪದ ಸಂಗಳ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಸ್ನೇಹಲೋಕ ಯುವ ಬಳಗ ವತಿಯಿಂದ ಭಾನುವಾರ ಯೋಧ ಚಂದ್ರಶೇಖರ ಬೇವಿನಕಟ್ಟಿ ಸೇವಾನಿವೃತ್ತರಾದ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಗತ ಹಾಗೂ ಅಭಿನಂದನ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮಕ್ಕೆ ಆಗಮಿಸಿದ ವೀರಯೋಧರನ್ನು ಸಕಲ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಸನ್ಮಾನ ಮಾಡಲಾಯಿತು. ಶಿಕ ಲಕ್ಷ$್ಮಣ ಮೋಟೆ ಮಾತನಾಡಿ, "ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಭಾರತೀಯ ಸೆನಿಕರ ವಿಜಯ ಕೊಂಡಾಡಿದರು. ಶಿವಯೋಗೆಪ್ಪ ಮೆಣಸಿಗಿ, ಗ್ರಾಪಂ ಅಧ್ಯೆ ಶಾಂತವ್ವ ಭಜಂತ್ರಿ, ಮಹಾಂತೇಶ ಅರಿಷಿನಗೋಡಿ, ಶಿಕರಾದ ಹೊಳಬಸು ಜಲಗೇರಿ, ಉಮೇಶ ರಾಜಮನಿ, ಡಿ.ಸಿ. ಕಲ್ಲನಗೌಡ್ರ ಇತರರಿದ್ದರು.