

ಹುಬ್ಬಳ್ಳಿ: ಮಕ್ಕಳ ದಿನಾಚರಣೆ ನಿಮಿತ್ತ ನಗರದ ಗೋಕುಲ ರಸ್ತೆಯ ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ವಿವಿಧ ಸ್ಪರ್ಧೆ ನಡೆಸಿ, ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.
ಶಾಲೆ ಅಧ್ಯಕ್ಷ ಪರಶುರಾಮ ಉಟವಾಲೆ ಮಾತನಾಡಿ, ಇಂದಿನ ಮಕ್ಕಳು ಭವಿಷ್ಯದ ನಾಯಕರು. ಈಗಿನಿಂದಲೇ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ಹೆತ್ತ ತಾಯಿಯಷ್ಟೇ ಪ್ರೀತಿಯನ್ನು ದೇಶದ ಮೇಲೆ ಇಡಬೇಕು ಎಂದರು.
ಕೆನರಾ ಬ್ಯಾಂಕ್ನಿಂದ ಸಂಸ್ಥೆಗೆ 187 ಬೆಂಚ್ಗಳನ್ನು ಸಿಎಸ್ಆರ್ ಅನುದಾನದಡಿ ವಿತರಿಸಲಾಯಿತು.
ಕೆನರಾ ಬ್ಯಾಂಕ್ನ ಡಿಜಿಎಂ ಟಿ.ಜಿ. ಬೋರಯ್ಯ, ಡಿಎಂ ಬಲೆರಾವ್ ಎನ್., ಎಸ್ಎಂ ಕಲ್ಮೇಶ ಪೂಜಾರ, ಶಾಲೆ ಉಪಾಧ್ಯಕ್ಷ ಎನ್.ಆರ್. ರವಿ, ಮಾಜಿ ಅಧ್ಯಕ್ಷ ಎಂ.ಕೆ. ಬಾಬಾಜಿ, ಜಿ.ಎಸ್. ನಾಯ್ಕ, ಆಡಳಿತಾಧಿಕಾರಿ ಉಮಾ ಪಾಟೀಲ, ಇತರರು ಇದ್ದರು.