

ಗಂಗಾವತಿ: ದೇಶದ ಸ್ವಾತಂತ್ರ್ಯಕ್ಕಾಗಿ ವೀರ ಸಾವರ್ಕರ್ ಜೀವನವನ್ನೇ ತ್ಯಾಗ ಮಾಡಿ ಕಠಿಣ ಶಿಕ್ಷೆ ಅನುಭವಿಸಿದ್ದರು ಎಂದು ಸದ್ಭಾವನಾ ಸಂಸ್ಥೆ ಅಧ್ಯಕ್ಷ ಸುಬ್ರಮಣ್ಯ ರಾಯ್ಕರ್ ಹೇಳಿದರು.
ನಗರದ ಗಣೇಶ ವೃತ್ತದ ಬಳಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಮಾರ್ಗದಲ್ಲಿ ಹಿಂದು ಪರ ಸಂಘಟನೆ ಮತ್ತು ವೀರ ಸಾವರ್ಕರ್ ಅಭಿಮಾನಿ ಬಳಗದಿಂದ ಬುಧವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶಾಭಿಮಾನದ ಕಿಚ್ಚು ಪ್ರತಿ ಮನೆ, ಮನದಲ್ಲೂ ಮೂಡಬೇಕಿದೆ ಎಂದರು. ಗಾಯಕ ಸದಾನಂದ ಶೇಟ್ ಅವರಿಂದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.