ಮತಕ್ಷೇತ್ರ ಅಭಿವೃದ್ಧಿಗೆ ನೂತನ ಶಾಸಕ ಪಠಾಣ ಮುಂದಾಗಲಿ

SGN SATAPPANAVAR
Published on

ಶಿಗ್ಗಾಂವಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಶಿಗ್ಗಾಂವಿ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದ 300 ಕೋಟಿ ರೂ. ಅನುದಾನವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಈ ಅನುದಾನವನ್ನು ಮರಳಿ ತಂದು ಕ್ಷೇತ್ರದ ಅಭಿವೃದ್ಧಿಗೆ ನೂತನ ಶಾಸಕ ಯಾಸೀರ್ ಅಹ್ಮದ್​ಖಾನ್ ಪಠಾಣ್ ಮುಂದಾಗಬೇಕು ಎಂದು ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಾಧರ ಸಾತಣ್ಣನವರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಲ್ಕು ಬಾರಿ ಶಾಸಕ, ಸಚಿವ, ಮುಖ್ಯ ಮಂತ್ರಿಗಳಾಗಿ ಹಿಂದು ಳಿದ ಶಿಗ್ಗಾಂವಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸಿದ ಖ್ಯಾತಿಗೆ ಬಸವರಾಜ ಬೊಮ್ಮಾಯಿ ಭಾಜನರಾಗಿದ್ದಾರೆ. ಶೈಕ್ಷಣಿಕ, ರಸ್ತೆಗಳ ಕ್ರಾಂತಿ ಮಾಡಿದ್ದಾರೆ. ಈಗ ಇಲ್ಲಿ ಅಭಿವೃದ್ಧಿ ಪಡಿಸಬೇಕಿರುವ ಕೆಲಸಗಳು ಅಷ್ಟಕಷ್ಟೇ. ಇನ್ನಷ್ಟು ಕೈಗಾರಿಕೆಗಳನ್ನು ತಂದು ಕ್ಷೇತ್ರದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಂದಾಗಿದ್ದರು ಎಂದರು. ಚುನಾವಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರದ ಅಭಿವೃದ್ಧಿಗೆ ನೂರು ಕೋಟಿ ರೂ. ನೀಡಿದ್ದಾಗಿ ಘೊಷಣೆ ಮಾಡಿದ್ದರು. ಅದರಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಮಾಹಿತಿ ಸ್ಥಳೀಯರಿಗೆ ತಿಳಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net