ಶಾಲಾಭಿವೃದ್ಧಿಗೆ ಪಾಲಕರು ಸಹಕರಿಸಲಿ

8Ankalagi1
Published on

ಅಂಕಲಗಿ: ವಿದ್ಯಾರ್ಥಿಗಳ ಪಾಲಕರು ಮಕ್ಕಳ ಕಲಿಕೆಯ ಬಗ್ಗೆ ಆಸಕ್ತಿ ಉಳ್ಳವರಾಗಿದ್ದು, ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಂಕಲಗಿ ಕೆ.ಜೆ. ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಭೀಮಗೌಡ ಪೊಲೀಸ್‌ಗೌಡರ ಹೇಳಿದರು.

ಸಮೀಪದ ಮಲ್ಲಾಪುರ (ಎಸ್‌ಎ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಸಕ ರಮೇಶ ಜಾರಕಿಹೊಳಿ ಅವರ ಶಿಾರಸಿನ ಮೇರೆಗೆ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 44 ಡೆಸ್ಕ್ ಮತ್ತು ಎಸ್‌ಎ ಪ್ರೌಢಶಾಲೆಗೆ 4 ಗಣಕಯಂತ್ರ ಹಸ್ತಾಂತರಿಸಿ ಮಾತನಾಡಿದರು.

ಸಂಸ್ಥೆಗಳು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು. ಶಾಸಕ ರಮೇಶ ಜಾರಕಿಹೊಳಿ ಮಲ್ಲಾಪುರಕ್ಕೆ ರಸ್ತೆ, ಕುಡಿಯುವ ನೀರು ಸೇರಿ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಯತ್ನಿಸುತ್ತಿದ್ದಾರೆ ಎಂದರು.

ಬಿಜೆಪಿ ಮಂಡಳ ಅದ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಶಾಲೆಗೆ ಡೆಸ್ಕ್‌ಗಳ ಪೂರೈಕೆಗೆ ಕಾರಣರಾದ ಶಾಸಕ ರಮೇಶ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರನ್ನು ಅಭಿನಂದಿಸಿದರು. ಗ್ರಾಮಸ್ಥರು ಭೀಮಗೌಡ ಪೊಲೀಸ್‌ಗೌಡರ ಮತ್ತು ರಾಜೇಂದ್ರ ಗೌಡಪ್ಪಗೋಳ ಅವರನ್ನು ಸನ್ಮಾನಿಸಿದರು.

ಶಾಲಾಭಿವೃದ್ಧಿ ಸಮಿತಿ ಅದ್ಯಕ್ಷ ಬಾಳಪ್ಪ ನಾಯಿಕ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ರಾಜು ಇರಪನ್ನಗೋಳ, ಗಂಗಪ್ಪ ಅಂಗಡಿ, ಅಡಿವೆಪ್ಪ ಮಳಗಲಿ, ಆನಂದ ಅತ್ತುಗೋಳ, ಬಸಗೌಡ ದೊಡಮನಿ, ಗೋಪಾಲ ಬೊಂಬ್ರಿ, ಬಸು ದಾಸನವರ, ಚಂದ್ರಪ್ಪ ಗಸ್ತಿ, ಗೌಸ್ ಮೋಮಿನ್, ಬಸನಗೌಡ ಪಾಟೀಲ, ಶಂಕರ ಬೊಂಬ್ರಿ, ಕಾಡಪ್ಪ ಹೊಸಗೌಡರ, ಬಸವರಾಜ ಬೊಂಬ್ರಿ, ಕೆ.ಬಿ.ಮನಗುತ್ತಿ, ಎಸ್.ಎಸ್.ಗಾಣಗಿ, ಶಿಕ್ಷಕಿ ವಾಣಿ ವಾರಿಮನಿ, ಚಂದ್ರಪ್ಪ ಪೂಜೇರಿ, ಗಂಗಪ್ಪ ಹರಿಜನ, ಆನಂದ ಸನದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net