ಇನ್ನಾದರೂ ಪಾಕಿಸ್ತಾನ ನರಿ ಬುದ್ಧಿ ಬಿಡಲಿ

Nrd cc p
Published on

ನರಗುಂದ: ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ವಿರುದ್ಧ ನಡೆಸಿದ ಆಪರೇಷನ್ ಸಿಂದೂರದಿಂದಾಗಿ ಆ ದೇಶದಲ್ಲಿ ಧಂಗೆಗೆ ಕಾರಣವಾಗಲಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಸೇನಾಡಳಿತ ಅಧಿಕಾರಕ್ಕೆ ಬಂದರೂ ಅಚ್ಚರಿಪಡಬೇಕಾಗಿಲ್ಲ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಶಿವಾಜಿ ವರ್ತುಲದಲ್ಲಿ ಬುಧವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಆಪರೇಷನ್ ಸಿಂದೂರ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು. ಸಿಂಧೂ ನದಿಯ ಒಪ್ಪಂದ ರದ್ದತಿಯಿಂದ ಅಲ್ಲಿಯ ಜನರಿಗೆ ಈಗಾಗಲೇ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಏ. 22ರಂದು ನಡೆದ ಘಟನೆಯಿಂದ ದೇಶಭಕ್ತರು ನೆಮ್ಮದಿಯಿಂದ ನಿದ್ದೆ ಮಾಡಿರಲಿಲ್ಲ. ಕರ್ನಾಟಕ ಸೇರಿ ವಿವಿಧ ರಾಜ್ಯಗಳ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಭಯೋತ್ಪಾದಕರು ಹಾಗೂ ಭಯೋತ್ಪಾದನೆ ಬೆಂಬಲಿಸುವವರಿಗೆ ದಿಟ್ಟ ಉತ್ತರ ನೀಡುವುದಾಗಿ ಪ್ರಧಾನಿ ಮೋದಿ ಶಪಥ ಮಾಡಿದ್ದರು. ಅಲ್ಲದೆ, ದಾಳಿ-ಗುರಿ, ಎಲ್ಲಿಂದ?ಯಾವಾಗ. ಯುದ್ದ ನಡೆಸಬೇಕೆಂಬುವುದರ ಬಗ್ಗೆ ಸೇನೆಗೆ ಮುಕ್ತ ಅವಕಾಶ ಕೊಟ್ಟಿದ್ದರು. ಇದು ದೇಶದ ಇತಿಹಾಸದಲ್ಲೇ ಪ್ರಥಮ ಎಂದರು.

ಅಂತಿಮವಾಗಿ ಭಾರತೀಯ ಸೈನಿಕರು ಬುಧವಾರ ಬೆಳಗಿನ ಜಾವ ಕಾರ್ಯಾಚರಣೆ ಮೂಲಕ ಉಗ್ರ 9 ಅಡಗುತಾಣ ಧ್ವಂಸಗೊಳಿಸಿದ್ದಾರೆ. ಅಲ್ಲದೆ 80ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿ ಪರಾಕ್ರಮ ಮೆರೆದಿದ್ದಾರೆ. ವಿಶೇಷವಾಗಿ ಜೈಶ್-ಎ ಮೊಹಮ್ಮದ್ ಉಗ್ರ ಸಂಘಟಣೆ ಮುಖ್ಯಸ್ಥ ಮಸೂದ ಅಜರ್ ಕುಟುಂಬದ 14 ಸದಸ್ಯರು ಹತರಾಗಿದ್ದಾರೆ. ಇದು ಭಾರತದ ವಿರುದ್ಧ ನಡೆಯುವ ಭಯೋತ್ಪಾದನೆಗೆ ಅಂತಿಮ ವಿರಾಮ ನೀಡಿದಂತಾಗಿದೆ. ಪಾಕಿಸ್ತಾನ ಇನ್ನಾದರೂ ನರಿ ಬುದ್ದಿ ಕೈಬಿಟ್ಟು ಶಾಂತಿಯುತ ನಡೆ ಅನುಸರಿಸುವುದು ಒಳಿತು ಎಂದರು

ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಕಾರಣೀಕರ್ತರಾಗಿರುವ ಪ್ರಧಾನಿ ಮೋದಿ, ಅಮಿತ್ ಷಾ, ರಾಜನಾಥ ಸಿಂಗ್, ಜೈಶಂಕರ, ನಿರ್ಮಲಾ ಸೀತಾರಾಮನ್ ಮತ್ತು ಸೇನಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಎನ್.ಬಿ. ಗಾಡಿ, ಎ.ಎಂ. ಹುಡೇದ, ಎಸ್.ಆರ್. ಪಾಟೀಲ, ಬಿ.ಬಿ. ಐನಾಪೂರ, ಪ್ರಕಾಶಗೌಡ ತಿರಕನಗೌಡ್ರ, ಎಂ. ಎಚ್. ತಿಮ್ಮನಗೌಡ್ರ, ಚಂದ್ರು ದಂಡಿನ, ಚಂಬಣ್ಣ ವಾಳದ, ಶಿವಪ್ಪ ಬೋಳಶೆಟ್ಟಿ, ರಾಚನಗೌಡ ಪಾಟೀಲ, ನಾಗರಾಜ ನೆಗಳೂರ ಪ್ರಶಾಂತ ಜೋಶಿ, ರಮೇಶಗೌಡ ಕರಕನಗೌಡ್ರ, ಬಿ.ಎಸ್.ಪಾಟೀಲ, ನವೀನಕುಮಾರ ಪಾಟೀಲ, ಎಸ್.ಬಿ.ಕರಿಗೌಡ್ರ ಅನೇಕರು ಉಪಸ್ಥಿತರಿದ್ದರು.

ಭಾರತೀಯ ಯೋಧರು ಪಾಕಿಸ್ತಾನದ ಉಗ್ರರನ್ನು ಹತ್ಯೆಗೈಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಏಕಿ ಹಣೆಗೆ ತಿಲಕವನ್ನಿಟ್ಟುಕೊಂಡು ಸುದ್ದಿಗೋಷ್ಠಿ ನಡೆಸಿ ಭಾರತೀಯ ಸೈನಿಕರ ಪರಿಶ್ರಮದ ಬಗ್ಗೆ ಕೊಂಡಾಡಿದ್ದಾರೆ. ಸಿಂದೂರ ಭಾರತೀಯರ ಸಂಕೇತ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಡವಾಗಿ ಅರಿತರೂ ಹೆಮ್ಮೆ ತರಿಸಿದೆ. ಇನ್ಮೇಲೆ ಅವರು ನಿರಂತರ ಸಿಂದೂರ ಇಟ್ಟುಕೊಂಡರೆ ನಾನು ವೈಯಕ್ತಿಕವಾಗಿ ವಿಧಾನಸೌಧದಲ್ಲಿ ಸನ್ಮಾನಿಸುತ್ತೇನೆ. ಸಿ.ಸಿ.ಪಾಟೀಲ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net