ಪ.ಮಲ್ಲೇಶ್ ಕ್ಷಮೆಯಾಚಿಸಲಿ

Pa. Mallesh
Published on

ಮೈಸೂರು: ಪ್ರಗತಿಪರ ಹೋರಾಟಗಾರ ಪ.ಮಲ್ಲೇಶ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿಪ್ರರನ್ನು ಅವಹೇಳನ ಮಾಡಿದ್ದಾರೆ. ಬಳಿಕ ಅವರು ಕೇವಲ ವಿಷಾದ ವ್ಯಕ್ತಪಡಿಸಿರುವುದು ಸರಿಯಲ್ಲ. ಕೂಡಲೇ ಬಹಿರಂಗವಾಗಿ ವಿಪ್ರರ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಪ್ರಬುದ್ಧರ ಪ್ರಕೋಷ್ಠದ ಸಂಚಾಲಕ ಎಸ್.ಕೆ. ರಾಜುಗೌಡ ಆಗ್ರಹಿಸಿದರು.


ಪ.ಮಲ್ಲೇಶ್ ಅವರು ಬ್ರಾಹ್ಮಣರನ್ನು ನಂಬಬೇಡಿ, ಅವರೊಡನೆ ಸೇರಬೇಡಿ ಎಂದು ಹೇಳಿರುವುದು ಖಂಡನೀಯ. ಸಾಮಾಜಿಕ ನ್ಯಾಯದ ಹೋರಾಟ ಮಾಡುವುದಾಗಿ ಹೇಳಿಕೊಳ್ಳುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅದೇ ವೇದಿಕೆಯಲ್ಲಿದ್ದರೂ ಘಟನೆ ಖಂಡಿಸದಿರುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುದ್ಮುಲ್ ರಂಗರಾವ್ ಅವರಿಂದ ಹಿಡಿದು ಬಹಳಷ್ಟು ಜನರು ಸಮಾಜಕ್ಕಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇದು ಪ.ಮಲ್ಲೇಶ್ ಅವರ ಕಣ್ಣಿಗೆ ಬೀಳಲಿಲ್ಲವೇ? ಪ.ಮಲ್ಲೇಶ್ ಕೂಡಲೇ ವಿಪ್ರರ ಕ್ಷಮೆಯಾಚಿಸಬೇಕು. ಇದರೊಡನೆ ಪೊಲೀಸ್ ಇಲಾಖೆ ಸಹಾ ಸಮಾಜದ ಸಾಮರಸ್ಯಕ್ಕೆ ಭಂಗ ತರುತ್ತಿದ್ದಾರೆಂಬ ಆರೋಪದ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಾಯಿಗೌಡ ಬನ್ನೂರು, ಮಲಿಯೂರು ರಾಜಣ್ಣ, ರವಿ, ಮಂಜೇಶ್, ರಾಜಣ್ಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net