ನಮ್ಮ ಜೀವನ ದೇಶಕ್ಕೆ ಮುಡಿಪಾಗಿರಲಿ

blm (2)
Published on

ಕಾರ್ಕಳ: ನಾವು ಬದುಕಿನಲ್ಲೆ ಅದೆಷ್ಟೇ ಸಾಧನೆಗಳ ಮಾಡಿದ್ದರೂ ನಮ್ಮ ಜೀವನ ದೇಶಕ್ಕೆ ಸಮರ್ಪಿತವಾಗಿರಲಿ ಎಂದು ವಾಗ್ಮಿ ಅಕ್ಷಯಾ ಗೋಖಲೆ ಹೇಳಿದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಮೌಲ್ಯಸುಧಾ ಮಾಲಿಕೆ ಸರಣಿಯ ಕಾರ್ಗಿಲ್ ವಿಜಯ ದಿನ ಆಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸದುದ್ದೇಶದ ಧ್ಯೇಯದಲ್ಲಿ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು. ಈ ಮೂಲಕ ದೇಶಾಭಿವೃದ್ಧಿಗೆ ಪೂರಕವಾಗಿ ಬದುಕುವಂತಹ ಜನರು ನಾವಾಗಬೇಕು. ಈ ನಿಟ್ಟಿನಲ್ಲಿ ಸೈನಿಕರೇ ನಮಗೆ ಮಾದರಿ, ಸ್ಫೂರ್ತಿ ಎಂದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ.ಕೊಡವೂರ್, ಉಪ ಪ್ರಾಂಶುಪಾಲ ಸಾಹಿತ್ಯ ಮತ್ತು ಉಷಾ ರಾವ್ ಯು., ಡೀನ್ ಅಕಾಡೆಮಿಕ್ಸ್‌ನ ಡಾ.ಮಿಥುನ್ ಯು., ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿ ಮುಖ್ಯಸ್ಥ ಸಂದೀಪಾ ಇದ್ದರು. ಡಾ.ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net