ಸಂಘಟನೆಗಳು ಸಾಮಾಜಿಕ ಹೊಣೆ ಅರಿತು ಕೆಲಸ ಮಾಡಲಿ

13.Pyp.. 01
ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಮ್ ಸಾಮಾಜಿಕ ಹೋರಾಟ ಸಮಿತಿಯ ನೂತನ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಆರ್.ಎಸ್.ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ, ಎಂ.ಎನ್.ಆದಿಶೇಷ, ಬಿ.ಜೆ.ಸುರೇಶ್ ಇತರರು ಇದ್ದರು.
Published on

ಪಿರಿಯಾಪಟ್ಟಣ : ಸಂಘಟನೆಗಳಿಗೆ ಸಾಮಾಜಿಕ ಜವಾಬ್ದಾರಿ ಇದ್ದು ಗೌರವ ತರುವಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಆರ್.ಎಸ್.ದೊಡ್ಡಣ್ಣ ತಿಳಿಸಿದರು.

ಪಟ್ಟಣದ ಡಿ. ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಸಾಮಾಜಿಕ ಹೋರಾಟ ಸಮಿತಿಯ ನೂತನ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಇಬ್ಬರೂ ಮಹನೀಯರು ಕೂಡ ದಲಿತ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಇವರ ಆದರ್ಶ ತತ್ವಗಳು ನಮಗೆ ದಾರಿದೀಪವಾಗಿದೆ. ಶೋಷಿತ ಸಮುದಾಯದ ಧ್ವನಿಯಾಗಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಇವರ ಆದರ್ಶ ತತ್ವಗಳನ್ನು ನಾವು ಪಾಲನೆ ಮಾಡಬೇಕು ಎಂದರು.

ಮಾದಿಗ ಸಮುದಾಯಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಇದೆ. ಸಂಘಟನೆಗಳಿಗೆ ಸಾಮಾಜಿಕ ಜವಾಬ್ದಾರಿ ಇದ್ದು ಅದನ್ನು ಅರಿತು ಕೆಲಸ ನಿರ್ವಹಿಸಬೇಕು. ಸಮುದಾಯದಲ್ಲಿ ಜಾಗೃತಿ ಮೂಡಿಸಿ ಅವರ ಅಭಿವೃದ್ಧಿಗೆ ಶ್ರಮಿಸಬೇಕು. ವಿದ್ಯಾವಂತರಿಗೆ ಹೆಚ್ಚಿನ ಜವಾಬ್ದಾರಿ ಇದ್ದು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಇಂದು ಮಾದಿಗ ಸಂಘಟನೆ ಬಹುದೊಡ್ಡ ಸಂಖ್ಯೆಯಲ್ಲಿದ್ದರೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅವಕಾಶಗಳಿಂದ ವಂಚಿತವಾಗಿದೆ ಇದನ್ನು ಪ್ರತಿಯೊಬ್ಬರು ಅರಿತುಕೊಂಡು ಹಕ್ಕು ಮತ್ತು ಸ್ವತಂತ್ರಕ್ಕಾಗಿ ಶ್ರಮಿಸಬೇಕು ಎಂದರು.

ಡಾ.ಬಾಬು ಜಗಜೀವನರಾಮ್ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಶ್ರೀನಿವಾಸ್ ಮೂರ್ತಿ ಮಾತನಾಡಿ, ಯುವ ಪೀಳಿಗೆ ವಿದ್ಯಾವಂತರಾಗಿ ಇತರರಿಗೆ ಮಾದರಿಯಾಗಬೇಕು. ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಎಂದಿಗೂ ಮರೆಯಬಾರದು. ಮಹನೀಯರುಗಳ ಬಗ್ಗೆ ಅರಿತುಕೊಳ್ಳುವುದರ ಮೂಲಕ ಇತರರಿಗೆ ತಿಳಿಸುವ ಕೆಲಸವಾಗಬೇಕು ಎಂದರು.

ಸಂಘದ ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಎಂ.ಎನ್.ಆದಿಶೇಷ, ಗೌರವಾಧ್ಯಕ್ಷ -ಬಿ.ಜೆ.ಸುರೇಶ್, ಉಪಾಧ್ಯಕ್ಷ -ಪಿ.ಹರೀಶ್, ಖಜಾಂಚಿ-ಬಿ.ಕೆ.ಉದಯ್,ಕಾರ್ಯದರ್ಶಿಗಳು-ಬಿ.ಕೆ.ಗಿರೀಶ್, ಇ.ನಟೇಶ್, ನಾಗೆಂದ್ರ, ಕುಮಾರ್, ಎಂ.ಕೆ.ಸಾಗರ್, ಚಂದ್ರ, ವೆಂಕಟೇಶ, ಸಂಚಾಲಕರಾಗಿ ಸ್ವಾಮಿ,ಶ್ರೀೀನಿವಾಸ, ಸಲಹೆಗಾರರಾಗಿ ಎಂ.ಕೆ.ಕಾಳಯ್ಯ ಬಿ.ಕೆ.ರವಿ, ಸದಸ್ಯರಾಗಿ ರವಿ, ಸುರೇಶ, ಪ್ರವೀಣ್, ಸೋಮಣ್ಣ, ಮಹದೇವ್ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮುದಾಯದ ಚುನಾಯಿತ ಪ್ರತಿನಿಧಿಗಳನ್ನು, ನಿವೃತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಸಾಮಾಜಿಕ ನ್ಯಾಯಪರವೇದಿಕೆ ಅಧ್ಯಕ್ಷ ಡಾ.ರವಿ ಕುಮಾರ್ ಮರಡೀಪುರ, ಮುಖಂಡರಾದ ಕೃಷ್ಣ ಮೂರ್ತಿ ಬ್ಯಾಲಾಳು, ಮಲ್ಲೇಶ್, ಶ್ರೀನಿವಾಸ್, ಅಕ್ಕಯ್ಯಮ್ಮ, ಲಕ್ಷ್ಮಮ್ಮ, ರಾಜು, ಮಹೇಶ್, ಹುಣಸೂರು ವೆಂಕಟೇಶ್, ಮಲ್ಲೇಶ್, ರಮೇಶ್, ಲೇಖಕಿ ಅಶ್ವಿನಿ, ಜ್ಯೋತಿ, ವೀಣಾ, ಲೋಕೇಶ್, ರಾಮು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net