ಸಂಘಟನೆಗಳು ಜನರಿಗೆ ಅರಿವು ಮೂಡಿಸಲಿ

ದೇವದುರ್ಗ ತಾಲೂಕಿನ ಗಾಣಧಾಳ ಕ್ರಾಸ್‌ನಲ್ಲಿ ಹೇಮರಡ್ಡಿ ಮಲ್ಲಮ್ಮ ವೃತ್ತ ನಿರ್ಮಾಣಕ್ಕೆ ಶ್ರೀ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಭೂಮಿಪೂಜೆ ನೆರವೇರಿಸಿದರು. ಹೇಮರಡ್ಡಿ ಮಲ್ಲಮ್ಮ ಸಂಘದ ತಾಲೂಕು ಗೌರವಾಧ್ಯಕ್ಷ ವೆಂಕಟರಾಯ ಬೆನಕನ್, ಪ್ರಮುಖರಾದ ಚಂದ್ರಶೇಖರ ಪಾಟೀಲ್ ಮಿಯ್ಯಪುರ, ಬಸನಗೌಡ ವಕೀಲ, ದೇವರೆಡ್ಡಿ ಇತರರಿದ್ದರು.

Published on

ದೇವದುರ್ಗ: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಸಂಘಟನೆಯಿಂದ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಸಸಿ ನೆಡುವುದು ಸೇರಿ ವಿವಿಧ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಜಾಲಹಳ್ಳಿ ಶ್ರೀ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಗಾಣಧಾಳ ಕ್ರಾಸ್‌ನಲ್ಲಿ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ವೃತ್ತ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಮಾಜಮುಖಿ ಕೆಲಸ ಮಾಡಿದಾಗ ಮಾತ್ರ ಸಂಘಟನೆಗೆ ಅರ್ಥಬರಲಿದೆ. ಸರ್ಕಾರವೇ ಎಲ್ಲ ಕೆಲಸ ಮಾಡುವುದು ಕಷ್ಟ. ಆದ್ದರಿಂದ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಸ್ವಚ್ಛತೆ, ಜಾಗೃತಿ, ಶಿಬಿರ, ಪರಿಸರ ಸಂರಕ್ಷಣೆ ಹಾಗೂ ಇತರ ಸಾಮಾಜಿಕ ಕೆಲಸ ಮಾಡಬೇಕಿದೆ. ಈ ಭಾಗದಲ್ಲಿ ಬಿಸಿಲು, ಮಳೆ ಕೊರತೆ, ಹವಾಮಾನ ವೈಪರೀತ್ಯ ವಿಪರಿತವಾಗಿದ್ದು, ಪರಿಸರ ಸಂರಕ್ಷಣೆಯೇ ಇದಕ್ಕೆ ಪರ್ಯಾಯ ಮಾರ್ಗವಾಗಿದೆ. ಮರಗಿಡಗಳನ್ನು ಬೆಳೆಸಿ ಸ್ವಚ್ಛತೆ ಕಾಪಾಡುವುದರಿಂದ ಆರೋಗ್ಯವಾಗಿ ಇರಬಹುದು. ಈ ನಿಟ್ಟಿನಲ್ಲಿ ಸಂಘಟನೆಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.

ಹೇಮರಡ್ಡಿ ಮಲ್ಲಮ್ಮ ಸಂಘದ ತಾಲೂಕು ಗೌರವಾಧ್ಯಕ್ಷ ವೆಂಕಟರಾಯ ಬೆನಕನ್, ಪ್ರಮುಖರಾದ ಚಂದ್ರಶೇಖರ ಪಾಟೀಲ್ ಮಿಯ್ಯಪುರ, ಬಸನಗೌಡ ವಕೀಲ, ದೇವರೆಡ್ಡಿ, ಭೀಮನಗೌಡ ಮಾಲಿ ಪಾಟೀಲ್ ಕಕ್ಕಲದೊಡ್ಡಿ, ಶಿವನಗೌಡ ಗಾಣಧಾಳ, ಲಕ್ಷ್ಮಿಪತಿ ಮಲ್ಕಾಪುರ, ಹನುಮರಡ್ಡಿ ವಜ್ಜಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net