ಮನೆಯಲ್ಲಿ ನಮ್ಮ ಸ್ವಭಾಷೆ ಮಾತ್ರ ಮೊಳಗಲಿ

20gkn1
Published on

ಗೋಕರ್ಣ: ವಿಶ್ವದ ಯಾವುದೇ ಭಾಗದಲ್ಲಿ ವಾಸಿಸಿದರೂ ಮನೆಯ ಹೊರಗೆ ಮತ್ತು ವ್ಯವಹಾರಗಳಿಗೆ ಅಲ್ಲಿನ ಭಾಷೆ ಅನಿವಾರ್ಯ. ಆದರೆ, ಮನೆಯೊಳಗೆ ನಮ್ಮ ಸ್ವಭಾಷೆ ಮಾತ್ರ ಮೊಳಗುವಂತಾಗಲಿ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಇಲ್ಲಿನ ಅಶೋಕೆಯಲ್ಲಿ 32ನೇ ಚಾತುರ್ವಸ್ಯ ವ್ರತನಿರತ ಶ್ರೀಗಳು ಬುಧವಾರ ಬ್ರಿಟನ್ ವಲಯದ ಶಿಷ್ಯರಿಂದ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವನ ನೀಡಿದರು.

ಹವ್ಯಕ ಸಮುದಾಯ ಮತ್ತು ನಮ್ಮ ಸ್ವಭಾಷೆಗೆ ಅದರದ್ದೇ ಆದ ಸ್ವಯಾರ್ಜಿತ ವಿಶಿಷ್ಟ ಪರಂಪರೆಯಿದೆ. ಮನೆಯಲ್ಲಿ ಸ್ವಭಾಷೆಯ ಬದಲು ಅನ್ಯ ಭಾಷೆಯನ್ನು ಆಡುವುದರಿಂದ ಮನೆಯಲ್ಲಿನ ಪೀಳಿಗೆಗೆ ಈ ವಿಶಿಷ್ಟ ಪರಂಪರೆಯ ಪ್ರಾತಿನಿಧ್ಯವೇ ಮರೆಯಾಗುವಂತಾಗುತ್ತದೆ. ಇದರೊಂದಿಗೆ ನಮ್ಮ ಸ್ವಭಾಷೆ ಮಾತ್ರವಲ್ಲದೆ, ಅದರಿಂದ ಉತ್ಪನ್ನವಾದ ನಮ್ಮ ಸಂಸ್ಕಾರ, ಸಂಸ್ಕೃತಿಗಳು ತನ್ನ ಸಂವಹವನ್ನು ಕಳೆದುಕೊಳ್ಳುತ್ತವೆ. ಹೀಗೆ ಸ್ವಭಾಷಾ ಬಂಧ ಕಳಚಲ್ಪಟ್ಟವರು ಮುಂದೆ ಶಾಶ್ವತವಾಗಿ ಸಂಸ್ಕಾರ ಮತ್ತು ಸಂಸ್ಕೃತಿಯ ಸಂಕರದ ಮುಖೇನ ತಮ್ಮ ಮೂಲತ್ವದ ವಿಯೋಗಕ್ಕೆ ಎರವಾಗುತ್ತಾರೆ. ಕಾರಣ ಸ್ವಭಾಷೆ ಕೇವಲ ಭಾಷಾ ಸಂವಹನ ಮಾತ್ರವಾಗಿರದೆ ನಮ್ಮತನದ ಪ್ರಾಚೀನ ಪರಂಪರೆಯ ವಾಹಕವೂ ಆಗಿದೆ ಎನ್ನುವುದರಲ್ಲಿ ಸ್ವಭಾಷೆಯ ಸಮಸ್ತ ಮಹತಿ ಮತ್ತು ಮೌಲಿಕತೆ ಅಡಗಿದೆ ಎಂದರು.

ಧರ್ಮಸಭೆಯಲ್ಲಿ ಕೇರಳ ಬಿಜೆಪಿ ಉತ್ತರ ವಲಯ ಅಧ್ಯಕ್ಷ ಮತ್ತು ಹಿರಿಯ ವಕೀಲ ಶ್ರೀಕಾಂತ, ಪ್ರ.ಕಾರ್ಯದರ್ಶಿ ಸುಧಾನ ಗೋಸಾಡ, ಪಕ್ಷ ಪ್ರಮುಖ ವಿಜಯಕುಮಾರ ರೈ, ಮಂಜೇಶ್ವರ ಮಂಡಲದ ಸುಬ್ರಹ್ಮಣ್ಯ ಭಟ್ಟ ಶ್ರೀಗಳಿಂದ ಆಶೀರ್ವಾದ ಪಡೆದರು.ಹಿರಿಯ ಲೋಸಂಪರ್ಕಾಧಿಕಾರಿ ಜಿ.ಕೆ .ಹೆಗಡೆ, ಚಾತುರ್ವಸ್ಯ ವೃಂದದ ಅರವಿಂದ ಧರ್ಬೆ, ನಿಖಿಲ್, ಪಿಆರ್​ಒ ಎಂ.ಎನ್. ಮಹೇಶ ಭಟ್ಟ, ಸುಚೇತನ ಶಾಸ್ತ್ರಿ, ವಿಷ್ಣು ಬನಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net