

ಅಥಣಿ ಗ್ರಾಮೀಣ: ಕಾಯಕದ ಮಹತ್ವ ಸಾರಿದ ನುಲಿಯ ಚಂದಯ್ಯ ಅವರು ಕಾಯಕದಲ್ಲಿ ದೇವರ ಕಂಡ ಮಹಾಶರಣ ಎಂದು ಶರಣ ನುಲಿಯ ಚಂದಯ್ಯ ಸಮುದಾಯದ ಅಧ್ಯಕ್ಷ ಪರಶುರಾಮ ಭಜಂತ್ರಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಸೋಮವಾರ ಚಂದಯ್ಯ ಸಮುದಾಯ ಹಾಗೂ ಗ್ರಾಪಂ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಶರಣ ನುಲಿ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಲ್ಯಾಣ ನಾಡಿನ ಶ್ರೇಷ್ಠ ಶರಣ, ಅನುಭಾವಿ ವಚನಕಾರ ನುಲಿಯ ಚಂದಯ್ಯ ಅವರು ಕಾಯಕ, ನಿಷ್ಠೆ, ಶಿವನಿಗೆ ಅರ್ಪಿತವಾಗುತ್ತದೆ ಎಂದು ಅಚಲವಾಗಿ ನಂಬಿ ಅದರಂತೆ ನಡೆದವರು. ಹೀಗಾಗಿ ಪ್ರತಿಯೊಬ್ಬರೂ ಅವರ ಆದರ್ಶ ಪಾಲಿಸಬೇಕು ಎಂದರು.
ಮುಖಂಡ ಗೂಳಪ್ಪ ಪೂಜಾರಿ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ ನೂಲಿ ಚಂದಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ರಮೇಶ ಕೊಕಟನೂರ, ಚಿದಾನಂದ ಭಜಂತ್ರಿ, ಚಂದ್ರಕಾಂತ ಮಾನೆ, ಅಜಿತ ಭಜಂತ್ರಿ, ಹನುಮಂತ ಮಾದರ, ಶಿವರಾಮ ಹೊನಕಾಂಬಳೆ, ಗಣಪತಿ ಭಜಂತ್ರಿ, ರಾಜು ಕಾಂಬಳೆ, ದೀಪಕ ಭಜಂತ್ರಿ, ಖಾದೀರ್ ಮುಲ್ಲಾ, ಅರವಿಂದ ಭಜಂತ್ರಿ ಇತರರು ಇದ್ದರು.
ಅಡಹಳ್ಳಿ ಗ್ರಾಮದ ಕಾಯಕಯೋಗಿ ನುಲಿಯ ಚಂದಯ್ಯ ವೃತ್ತದಲ್ಲಿ ಸೋಮವಾರ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ಗ್ರಾಪಂ ಮಾಜಿ ಸದಸ್ಯ ಬಸವರಾಜ ಧೂಳಶೆಟ್ಟಿ, ಪಿಕೆಪಿಎಸ್ ನಿರ್ದೇಶಕ ಪರಸಪ್ಪ ಅಥಣಿ ಹಾಗೂ ಸುನೀಲ ಕೆಂಚಣ್ಣವರ ನೂಲಿ ಚಂದಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮೋಹನ ಸೂರ್ಯವಂಶಿ, ಬಾಬು ಸನದಿ, ಸರೇಂದ್ರ ಭಜಂತ್ರಿ, ಅರುಣ ಕೋಹಳ್ಳಿ, ಮಹಾದೇವ ಪಾಟೀಲ, ಸತ್ಯಪ್ಪ ಸನದಿ, ಅಣ್ಣಪ್ಪ ಹಾಲಳ್ಳಿ, ಸದಾಸಿವ ಕೋಳಿ, ಪರುಶರಾಮ ಭಜಂತ್ರಿ, ಪವನ ಭಜಂತ್ರಿ, ಶಂಕರ ಮಾಳಿ, ಮಹಾದೇವ ನಾಟಿಕಾರ ಇತರರು ಇದ್ದರು.
ರಾಯಬಾಗ ವರದಿ: ತಾಲೂಕಿನ ಮೊರಬ ಗ್ರಾಪಂನಲ್ಲಿ ನುಲಿಯ ಚಂದಯ್ಯ ಜಯಂತ್ಯುತ್ಸವವನ್ನು ಸೋಮವಾರ ಆಚರಿಸಲಾಯಿತು. ದಿವಾಕರ ಅಸೂದೆ, ಶ್ರಾವಣ ಕಾಂಬಳೆ, ಪರಶುರಾಮ ಭಜಂತ್ರಿ, ಪ್ರಕಾಶ ಭಜಂತ್ರಿ, ಆನಂದ ಸಪ್ತಸಾಗರೆ, ಸದಾಶಿವ ಅಸೋದೆ, ಕಲ್ಲಪ್ಪ ಅಸೋದೆ, ಅಜಿತ ದಳವಾಯಿ, ಉಮೇಶ ಅಸೋದೆ, ಆನಂದ ಅಸೋದೆ ಇದ್ದರು.