ರಾಷ್ಟ್ರೀಯತೆ ಪ್ರತಿಯೊಬ್ಬರ ಧ್ಯೇಯವಾಗಲಿ

New Balaji New
Published on

ಹುಬ್ಬಳ್ಳಿ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಬಾಲಾಜಿ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ರಾಷ್ಟೀಯತೆ ನಮ್ಮೆಲ್ಲರ ಧ್ಯೇಯವಾಗಬೇಕು. ಭಾರತ ನಮ್ಮ ಪಾಲಿಗೆ ಕೇವಲ ಭೂಮಿಯಲ್ಲ, ಬದಲಾಗಿ ನಮ್ಮೆಲ್ಲರ ಮಾತೃಭೂಮಿ. ದೇಶಭಕ್ತಿ ಪ್ರತಿಯೊಬ್ಬರಲ್ಲೂ ಮೊಳಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಮಾತನಾಡಿದರು. ಆರೆಸ್ಸೆಸ್ ನ ಸುರೇಶ ಜಿ., ನಿವೃತ್ತ ಯೋಧ ಎಂ.ಕೆ. ನಾಯ್ಕರ್, ಆಸ್ಪತ್ರೆಯ ವೈದ್ಯರಾದ ಡಾ. ಆನಂದ ಕೊಪ್ಪದ, ಡಾ. ಇತಿ ಸಿಂಗ್, ಡಾ. ಮಂಜುನಾಥ ಬಿಜಾಪುರ, ಡಾ. ಅಬೀದ್ ಹುಸೇನ್, ಡಾ. ಆಕಾಶ, ಡಾ. ಜಯಮೇಜಯ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net