ನಾಸಿರ್ ಹುಸೇನ್ ಬಂಧನವಾಗಲಿ

Araga Jnanendra
Published on

ತೀರ್ಥಹಳ್ಳಿ: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವ್ಯಕ್ತಿಗಳನ್ನು ವಿಧಾನಸಭೆಯ ಒಳಗೆ ಕರೆತಂದಿದ್ದ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರನ್ನೂ ಬಂಽಸಿ ದೇಶದ್ರೋಹದ ಕೇಸ್ ದಾಖಲಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ. ಹೇಳಿಕೆ ನೀಡಿರುವ ಅವರು, ಈ ದೇಶದ ಅನ್ನ ತಿಂದು ವಿಧಾನಸಭೆ ಒಳಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿ ದೇಶ ವಿರೋಽ ನಿಲುವು ತಾಳುವುದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ಎನ್ನುವುದೇ ಇವರಿಗೆ ಕಾರಣ. ನಾಸಿರ್ ಹುಸೇನ್ ಅವರಂಥ ವ್ಯಕ್ತಿಗೆ ಕಾಂಗ್ರೆಸ್ ಪಕ್ಷ ರಾಜ್ಯಸಭೆಗೆ ಟಿಕೆಟ್ ನೀಡಿ ಗೆಲ್ಲಿಸಿರುವುದು ನಾಚಿಕೆಗೇಡು. ಈ ಪ್ರಕರಣದಲ್ಲಿ ಬಂಽತರಾಗಿರುವ ಮೂವರೂ ದೇಶದ್ರೋಹದ ಬಗ್ಗೆ ಚಿಂತಿಸುವ ವ್ಯಕ್ತಿಗಳು ಎಂಬುದು ಸ್ಪಷ್ಟ. ಇವರನ್ನು ಸಮರ್ಥಿಸಿಕೊಂಡವರ ಮೇಲೂ ಪ್ರಕರಣ ದಾಖಲಾಗಬೇಕು. ಸಮಗ್ರ ತನಿಖೆಗಾಗಿ ಎನ್‌ಐಎಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net