

ಗೊಳಸಂಗಿ: ಸ್ಥಳಿಯರಿಗೆ ಉದ್ಯೋಗಾವಕಾಶ ಸೇರಿದಂತೆ ಈ ಭಾಗದ ಎನ್ಟಿಪಿಸಿ ಮೇಲೆ ನಿರೀೆ ಇತ್ತು. ಬಿಹಾರ, ಎಂಪಿ, ಯುಪಿ ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಲಾಭ ಪಡೆಯುತ್ತಿದ್ದಾರೆ.
ಈ ಭಾಗದ ಸಂಸದರು ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್ಟಿಪಿಸಿ ಮೇಲೆ ಹೆಚ್ಚಿನ ನಿಗಾವಹಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಕೂಡಗಿ ಗ್ರಾಮದಲ್ಲಿ ಎನ್ಟಿಪಿಸಿ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆರಂಭದಲ್ಲಿ ಎನ್ಟಿಪಿಸಿಯಿಂದ ತೆರಿಗೆ ಹಣ ಬರುವುದಿಲ್ಲ ಎಂದು ಕೆಲವರು ವಾದಿಸಿದ್ದರು. ಹಾಗಂತ ನಾವು ಸುಮ್ಮನೆ ಕುಳಿತಿದ್ದರೆ ನಮ್ಮ ಪಾಲಿನ ಹಣ ಬೇರೆ ಜಿಲ್ಲೆಗೆ ಹೋಗುತ್ತಿತ್ತು. ಕೋಟ್ಯಂತರ ರೂ. ತೆರಿಗೆ ಹಣ ಈ ಭಾಗದ 5 ಗ್ರಾಮಗಳಿಗೆ ಸಿಗುವಂತೆ ಮಾಡಲಾಯಿತು. ಅದರಲ್ಲಿ ಸಿಂಹಪಾಲು ಕೂಡಗಿ ಗ್ರಾಮಕ್ಕೆ ಲಭ್ಯವಾಗಿದೆ. ಹೀಗಾಗಿ ಇದು ಬೆಂಗಳೂರು ಬಳಿಯ ದೇವನಹಳ್ಳಿಯ ನಂತರ ರಾಜ್ಯದಲ್ಲೇ ಹೆಚ್ಚಿನ ತೆರಿಗೆ ಪಡೆಯುವ ಎರಡನೇ ಗ್ರಾಮವಾಗಿದೆ ಎಂದರು.
ಕೂಡಗಿ ಕೆರೆಯನ್ನು ಬಸವನಬಾಗೇವಾಡಿ ೇತ್ರದಲ್ಲೇ ಮಾದರಿ ಕೆರೆ ಮಾಡುವ ಚಿಂತನೆ ಇದೆ. ಆದರೆ ಅದನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ ಸ್ವಇಚ್ಛೆಯಿಂದ ಬಿಟ್ಟು ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಆಲಮಟ್ಟಿ ನೀರು ನೆರೆಯ ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗೆ ಹೋಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯವಿರುವ ಇನ್ನಷ್ಟು ಭೂಸ್ವಾಧಿನ ಮಾಡಿಕೊಂಡು ನಮ್ಮ ಜಿಲ್ಲೆಗೆ 80 ಟಿಎಂಸಿ ನೀರು ಕೊಡಬೇಕು ಎಂದು ಈ ಭಾಗದ ಜನಪ್ರತಿನಿಧಿಗಳು ಮುಖ್ಯಮಂತ್ರಿ ಹಾಗೂ ಡಿಸಿಎಂ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅರಳಿಚಂಡಿಯ ಪರಮಾನಂದ ಗುರೂಜಿ, ಮೆಹರಾಜಪೀರಾ ಜಾಗೀರದಾರ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಧುರೀಣ ತಾನಾಜಿ ನಾಗರಾಳ, ಜಿಪಂ ಮಾಜಿ ಉಪಾಧ್ಯ ಚಂದ್ರಶೇಖರಗೌಡ ಪಾಟೀಲ, ಗ್ರಾ.ಪಂ. ಅಧ್ಯೆ ಹುಸೇನಬಿ ಮಾಶ್ಯಾಳ ಅಧ್ಯತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯ ರಫೀಕ ಪಕಾಲಿ, ಸುರೇಶ ಹಾರಿವಾಳ, ತಹಸೀಲ್ದಾರ್ ಎಸ್.ಎಸ್.ನಾಯಕಲ್ಲಮಠ, ತಾಪಂ ಇಒ ಸುನೀಲ ಮದ್ದೀನ, ಗ್ರಾಮೀಣ ಕುಡಿಯುವ ನೀರು, ನೆರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರ ವಿ.ಬಿ.ಗೊಂಗಡಿ, ಸಿಡಿಪಿಒ ಶಿಲ್ಪಾ ಹಿರೇಮಠ, ಪಿಡಿಒ ಎ.ಎಸ್.ಕೋಟ್ಯಾಳ, ಗ್ರಾಪಂ ಉಪಾಧ್ಯ ಅರುಣ ನಾಯಕ ಹಾಗೂ ಸದಸ್ಯರು ಇದ್ದರು.
ತಾಪಂ ಮಾಜಿ ಉಪಾಧ್ಯ ಈಶ್ವರ ಜಾಧವ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜ ಜಾಲವಾದಿ ನಿರೂಪಿಸಿದರು. ಗ್ರಾಪಂ ಸದಸ್ಯ ಆರ್ೀ ತಾಳಿಕೋಟಿ ವಂದಿಸಿದರು.
ಇದಕ್ಕೂ ಮೊದಲು ಗ್ರಾಮದ ಮಹಿಬೂಬ ಸುಬಾನಿ ದರ್ಗಾದಿಂದ ಮನಗೂಳಿ, ಅರಳಿಚಂಡಿ, ಕೂಡಗಿ ಶ್ರೀಗಳು ಮತ್ತು ಸಚಿವ ಶಿವಾನಂದ ಪಾಟೀಲರನ್ನು ಸಾರೋಟದಲ್ಲಿ ಮೆರವಣಿಗೆ ಮೂಲಕ ಗ್ರಾಪಂ ಆವರಣಕ್ಕೆ ಬರಮಾಡಿಕೊಳ್ಳಲಾಯಿತು.