ಕೈಕುಳಿ ಮೂಲಕ ಗಣಿಗಾರಿಕೆಗೆ ಅವಕಾಶ ನೀಡಿ

7-pnp 2a
Published on

ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟ ಕಾವಲ್ ಪ್ರದೇಶದಲ್ಲಿ ಕೈಕುಳಿ ಮೂಲಕ ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಕಾವೇರಿಪುರ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಂಭಾಗ ಕಲ್ಲು ಒಡೆಯುವ ಸುತ್ತಿಗೆ, ಹಾರೆ ಸೇರಿ ಇತರ ವಸ್ತುಗಳೊಂದಿಗೆ ಜಮಾವಣೆಗೊಂಡ ಗ್ರಾಮಸ್ಥರು, ನಮಗೆ ಕಲ್ಲು ಒಡೆಯುವುದನ್ನು ಬಿಟ್ಟು ಬೇರೆ ಉದ್ಯೋಗ ತಿಳಿದಿಲ್ಲ. ಹೀಗಾಗಿ ನಮಗೆ ಗಣಿಗಾರಿಕೆ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿದರು.
ನಮ್ಮ ತಾತ, ಮತ್ತಾತನ ಕಾಲದಿಂದಲೂ ಕಲ್ಲು ಒಡೆದು ಜೀವನ ಸಾಗಿಸಿಕೊಂಡು ಬಂದಿದ್ದೇವೆ. ಕಲ್ಲು ಗಣಿಗಾರಿಕೆ ಮೇಲೆಯೇ ನಮ್ಮ ಕುಟುಂಬಗಳು ಅವಲಂಬಿತವಾಗಿದ್ದು, ಇದನ್ನು ಬಿಟ್ಟರೆ ನಾವು ಬದುಕುವುದೇ ಕಷ್ಟವಾಗಲಿದೆ ಎಂದು ಹೇಳಿದರು.

ಪೊಲೀಸರು ವಿನಂತಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು. ಭೋವಿ ಜನಾಂಗದ ಅಧ್ಯಕ್ಷ ಜಗನ್ನಾಥ, ಕೃಷ್ಣಪ್ಪ, ಪುರುಷೋತ್ತಮ್, ಶರವಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net