ವಸತಿರಹಿತರಿಗೆ ನೀವೇಶನ ನೀಡಲಿ

10 kmp 04
ಕಂಪ್ಲಿ ತಹಸೀಲ್ದಾರ್ ಎಸ್.ಶಿವರಾಜಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸೇರಿದೆಂ್ತ ನಾನಾ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ವಸಂತರಾಜ ಕಹಳೆ, ಸಣಾಪುರ ಮರಿಸ್ವಾಮಿ, ಬಿ.ಗಂಗಾಧರ, ಅರುಣಾ, ಉಷಾ ಇತರರಿದ್ದರು.
Published on

ಕಂಪ್ಲಿ: ಬಗರ್‌ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಮಾನ್ಯಮಾಡಿ ಭೂ ಮಂಜೂರಾತಿ ನೀಡುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ನಾನಾ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಮನ್ವಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ಭೂರಹಿತರು ವಾಸಿಸುವ, ಆಹಾರ ಉತ್ಪಾದಿಸುವ ಜಮೀನನ್ನು ಕಾನೂನಿನಡಿ ಮಾನ್ಯ ಮಾಡಿ ಭೂಮಂಜೂರಾತಿ ನೀಡಬೇಕು. ಅರಣ್ಯಭೂಮಿಗಳ ಅರ್ಜಿ ಸಲ್ಲಿಸಿದವರಿಗೆ ಅರಣ್ಯ ಇಲಾಖೆಯ ಕಿರುಕುಳ ತಪ್ಪಿಸಿ ಭೂಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು.

ನಮೂನೆ 50, 53ರಲ್ಲಿ ಅರ್ಜಿ ಸಲ್ಲಿಸಿದವರಿಗೂ, ಭೂಮಂಜೂರಾತಿಯಾಗಿ ಭೂಮಿಯ ಹಕ್ಕು ನೀಡಿಲ್ಲದವರ ಪ್ರಕರಣಗಳನ್ನು ಒಂದೇ ಬಾರಿ ಪರಿಹರಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕು. ವಸತಿರಹಿತರಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸಮಿತಿ ಪದಾಧಿಕಾರಿ ಸಣಾಪುರ ಮರಿಸ್ವಾಮಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ತಾಲೂಕು ಕಾರ್ಯಕರ್ತೆ ಅರುಣಾ, ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಗಂಗಾಧರ, ಪದಾಧಿಕಾರಿಗಳಾದ ಉಷಾ, ಗುಬಾಜಿ ರಾಮಾಂಜಿನಿ, ಶಿವಪ್ಪ, ಎಂ.ಶಿವಪ್ಪ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಮಣ್ಣೂರು ರವಿ, ಪ್ರಮುಖರಾದ ಟಿ.ರುದ್ರಪ್ಪನಾಯಕ, ದುರುಗೇಶ ಬರಗೂರು, ಈ.ಧನಂಜಯ, ರಮೇಶ, ಜಿ.ವೆಂಕಟೇಶ, ಜಿ.ರಾಮಯ್ಯ, ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net