ಜಾತಿ ಮೀರಿ ಮನುಷ್ಯ ಬೆಳೆಯಲಿ

Let man grow beyond caste
ನವನಗರದ ಬಸವೇಶ್ವರ ಬ್ಯಾಂಕ್ ಬಸವ ಕಲಾ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಬಂಗಾರದ ಮನುಷ್ಯ ಅಶೋಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಉದ್ಘಾಟಿಸಿದರು. ಗುರುರಾಜ ಹೊಸಕೋಟಿ, ಶ್ರೀರಾಮ ಇಟ್ಟಣ್ಣವರ, ಐ.ಬಿ.ಹಳ್ಳೂರ, ಮಾಲಾಬಾಯಿ ಬೀಳಗಿ, ಈಶ್ವರ ಶೆಟ್ಟರ, ಡಾ. ವಿ.ಎಂ. ಕುಂಟೋಜಿ ಇದ್ದರು.
Published on

ಬಾಗಲಕೋಟೆ: ವಿಡಿಯೋ ಗ್ರಾಫಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಚಿಟ್‌ಚಾಟ್ ಅಶೋಕ ಅಜಾತಶತ್ರು ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಹೇಳಿದರು.

ನವನಗರದ ಬಸವೇಶ್ವರ ಬ್ಯಾಂಕ್ ಬಸವ ಕಲಾ ವೇದಿಕೆಯಲ್ಲಿ ಮಂಗಳವಾರ ಸಂಜೆ ಚಿಟ್ ಚಾಟ್ ಅಶೋಕ ಅಭಿಮಾನಿ ಬಳಗ ಹಾಗೂ ಕುಂಟೋಜಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ 50ನೇ ಕರ್ನಾಟಕ ರಾಜ್ಯೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಬಂಗಾರದ ಮನುಷ್ಯ ಅಶೋಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರೊಳಗೆ ಬೆರೆಯುವ ಏಕೈಕ ವ್ಯಕ್ತಿ ಎಂದರೆ ಅದು ಚಿಟ್ ಚಾಟ್ ಅಶೋಕ. ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಅತ್ಯಂತ ವಿಶಿಷ್ಟವಾಗಿ ಚಿತ್ರೀಕರಿಸುವಲ್ಲಿ ಇವರಂತಹ ವ್ಯಕ್ತಿ ಬೇರೊಬ್ಬರಿಲ್ಲ ಎಂದರು.

ಪತ್ರಕರ್ತ ಈಶ್ವರ ಶೆಟ್ಟರ ಮಾತನಾಡಿ, ಅಶೋಕ ಅವರು ಜಾತಿ ಮೀರಿ ಬೆಳೆದ ಏಕೈಕ ವ್ಯಕ್ತಿ. ಜಿಲ್ಲೆಯಲ್ಲಿ ಚಿಟ್ ಚಾಟ್ ಅಶೋಕ ಎಂದೇ ಚಿರಪರಿಚಿತರು. ಎಲ್ಲ ವಯೋಮಾನದ ಸ್ನೇಹದಿಂದ ಬೆರೆತು ಎಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಜನರಿಗೆ ಬಂಗಾರದ ಮನುಷ್ಯ ಅಶೋಕ ಪ್ರಶಸ್ತಿ ನೀಡಲಾಯಿತು. ರಾಜಕೀಯ ಕ್ಷೇತ್ರದಲ್ಲಿ ಸಚಿವ ಆರ್. ಬಿ. ತಿಮ್ಮಾಪೂರ, ಕಲಾ ಕ್ಷೇತ್ರದಲ್ಲಿ ಗುರುರಾಜ ಹೊಸಕೋಟಿ, ಸಹಕಾರ ಕ್ಷೇತ್ರದಲ್ಲಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಆರೋಗ್ಯ ಕ್ಷೇತ್ರದಲ್ಲಿ ಡಾ. ಬಸವರಾಜ ಕೆರೂಡಿ, ಸಾಹಿತ್ಯದಲ್ಲಿ ಶ್ರೀರಾಮ ಇಟ್ಟಣ್ಣವರ, ಸಿನಿಮಾ ಒಳವಿನ್ಯಾಸ ಐ. ಬಿ. ಹಳ್ಳೂರ, ಸಂಗೀತದಲ್ಲಿ ಮಾಲಾಬಾಯಿ ಬೀಳಗಿ, ಪತ್ರಿಕೋದ್ಯಮದಲ್ಲಿ ಈಶ್ವರ ಶೆಟ್ಟರ, ಬಯಲಾಟ ಶಾಂತಪ್ಪ ಬಾಡದ, ವಿಡಿಯೋಗ್ರಾಫಿಯಲ್ಲಿ ಅನಿಲ ಕಲಬುರಗಿ,ಫೋಟೋಗ್ರಾಫಿಯಲ್ಲಿ ವಿವೇಕಾನಂದ ಗರಸಂಗಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ವಿ.ಎಂ. ಕುಂಟೋಜಿ, ಬಾಬು ಮುದ್ದೇಬಿಹಾಳ, ಭೀಮು ಜಮಖಂಡಿ, ರಾಘು ಕಲಾಲ, ಶಬ್ಬೀರ ಬಿಜಾಪುರ, ಆರ್.ಡಿ. ಬಾಬು, ರಾಜು ಕುಂಟೋಜಿ, ಸಿರಾಜ್ ಮುದ್ದೇಬಿಹಾಳ, ಫಿರೋಜ್ ಪಟ್ಟದಕಲ್ಲ, ಆಬೀದ ಬೀಳಗಿ, ಮುನ್ನಾ ಬೀಳಗಿ, ಮಹೆಬೂಬ ಪಟ್ಟದಕಲ್ಲ, ಚಂದ್ರು ಕೆ. ಕೆ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net