ಮಹಾವೀರರ ಸಿದ್ಧಾಂತ ಅಳವಡಿಸಿಕೊಳ್ಳಲಿ

web9
ಮಾಂಜರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಇಂದ್ರಧ್ವಜ ಆರಾಧನಾ ಮಹೋತ್ಸವದಲ್ಲಿ ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರನ್ನು ಸನ್ಮಾನಿಸಲಾಯಿತು. ಅಣ್ಣಾಸಾಹೇಬ ಪಾಟೀಲ ಇದ್ದರು.
Published on

ಮಾಂಜರಿ: ಪ್ರತಿಯೊಬ್ಬರು ಎಲ್ಲ ಜೀವಿಗಳನ್ನು ಪ್ರೀತಿಯಿಂದ ಕಾಣಬೇಕು. ಭಗವಾನ ಮಹಾವೀರರ ತತ್ತ್ವ ಹಾಗೂ ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿವೆ ಎಂದು ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇಂದ್ರಧ್ವಜ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾವೀರರು ಯೌವ್ವನಾವಸ್ಥೆಗೆ ಬಂದಾಗ ರಾಜ್ಯ ಆಳುವ ಜವಾಬ್ದಾರಿ ವಹಿಸಿಕೊಂಡರು. ಆದರೆ, 30ನೇ ವಯಸ್ಸಿನಲ್ಲಿ ಸರ್ವ ರಾಜಭೋಗ ತ್ಯಜಿಸಿ ಆತ್ಮಕಲ್ಯಾಣದ ಹಾದಿ ತುಳಿಯುವ ಮೂಲಕ ಭೋಗ ಜೀವನಕ್ಕಿಂತ ತ್ಯಾಗ ಜೀವನ ಶ್ರೇಷ್ಠ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನ್ನವರ, ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಮರ ಯಾದವ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಮೋಹನ ಲೋಕರೆ, ಉಪಾಧ್ಯಕ್ಷ ಪಾಂಡುರಂಗ ಮಾನೆ, ಶಿವಾಜಿ ಸೌಹಾರ್ದ ಸಂಸ್ಥೆ ಅಧ್ಯಕ್ಷ ಅಶೋಕ ಕಾಳವಿರೆ, ಮುಖಂಡ ಶೀತಲ ಪಾಟೀಲ ಇತರರಿದ್ದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಸನತ್‌ಕುಮಾರ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net