ಭಾಷಾಭಿಮಾನ ನವೆಂಬರ್‌ಗೆ ಸೀಮಿತವಾಗದಿಲಿ

08 TKE 2
Published on

ತರೀಕೆರೆ: ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳುವುದರಿಂದ ಭಾಷೆ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಸಿವಿಲ್‌ಇಂಜಿನಿಯರ್ ಎಚ್.ಸಿ.ಗೋಪಾಲಕೃಷ್ಣ ಅವರ ಮನೆಯಂಗಳದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸುವರ್ಣ ನುಡಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನವೆಂಬರ್‌ನಲ್ಲಿ ಮಾತ್ರ ಕನ್ನಡಾಭಿಮಾನ ತೋರಿದರೆ ಸಾಲದು. ಸಾಹಿತ್ಯ ಚಟುವಟಿಕೆ, ಭಾಷೆ ಮೇಲಿನ ಪ್ರೀತಿ ಸದಾ ನಿರಂತರವಾಗಬೇಕು. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯಾದ್ಯಂತ ಉತ್ತಮ ಕಾರ್ಯಕ್ರಮ ಆಯೋಜನೆಗೊಳಿಸುತ್ತಿದ್ದು, ಉದಯೋನ್ಮುಖ ಲೇಖಕರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ಸುವರ್ಣನುಡಿ ಕಾರ್ಯಕ್ರಮ ಅರ್ಥಪೂರ್ಣಗೊಳಿಸಲು ನವೆಂಬರ್ ತಿಂಗಳು ಪೂರ್ತಿ ಭಾಷಾ ಪ್ರೇಮಿಗಳ ಮನೆಗಳಲ್ಲಿ ಆಯೋಜನೆಗೊಳಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ತ.ಮ.ದೇವಾನಂದ್, ಹಿರಿಯ ಸದಸ್ಯ ಬಿ.ಎಸ್.ಭಗವಾನ್, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ, ಪ್ರಮುಖರಾದ ಎಚ್.ಸಿ.ಗೋಪಾಲಕೃಷ್ಣ, ಡಾ.ಮರಳುಸಿದ್ದಯ್ಯ ಪಟೇಲ್, ಆರ್.ಎನ್.ಶ್ರೀನಿವಾಸ್, ಮಂಜುನಾಥ್, ಶಂಕರಪ್ಪ, ಚಂದ್ರಶೇಖರ್, ಉಮಾ, ರೋಹಿಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net