ಸಾಹಿತ್ಯ ಸತ್ಯ, ನ್ಯಾಯದ ಪರವಾಗಿ ನಿಲ್ಲಲಿ

ಬಾಗಲಕೋಟೆ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಜಿ.ಕೆ.ತಳವಾರ ಸಾಹಿತ್ಯ ಕುರಿತ ವಿಚಾರ ಸಂಕಿರಣವನ್ನು ಕವಿ ಡಾ.ಸತ್ಯಾನಂದ ಪಾತ್ರೋಟ ಉದ್ಘಾಟಿಸಿದರು. ಕಮತಗಿ ಹಿರೇಮಠದ ಶಿವಕುಮಾರ ಸ್ವಾಮೀಜಿ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಲಲಿತಾ ಹೊಸಪ್ಯಾಟಿ, ಪಾಂಡುರಂಗ ಸನ್ನಪ್ಪನವರ, ಪ್ರಾಚಾರ್ಯ ಡಾ.ಎಸ್.ಆರ್.ಮೂಗನೂರಮಠ, ಜಿ.ಕೆ. ತಳವಾರ ಇತರರು ಇದ್ದರು.

Published on

ಬಾಗಲಕೋಟೆ: ಬದುಕು ಅನಾವರಣಗೊಳಿಸುವ ಸಾಹಿತ್ಯ ಸತ್ಯ ಹಾಗೂ ನ್ಯಾಯದ ಪರವಾಗಿ ನಿಲ್ಲಬೇಕು. ಇನ್ನೊಬ್ಬರಲ್ಲಿ ಪರಿವರ್ತನೆ ತರಲು ಸ್ಫೂರ್ತಿಯಾಗಬೇಕು ಎಂದು ಕವಿ ಡಾ.ಸತ್ಯಾನಂದ ಪಾತ್ರೋಟ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕಮತಗಿ ಮೇಘಮೇತ್ರಿ ಕನ್ನಡ ಸಾಹಿತ್ಯ ಸಂಘ ಹಾಗೂ ಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಶನಿವಾರ ನಡೆದ ಸಾಹಿತಿ ಜಿ.ಕೆ.ತಳವಾರ ಸಾಹಿತ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಜನರ ಬದುಕಿಗೆ ಹಾಸು ಹೊಕ್ಕಾಗಿರಬೇಕು ಎಂದರು.

ಬರಹಗಾರನಿಗೆ ಅಹಂಕಾರ ಮೀರಿದ ಆಪ್ತತೆ, ಜಾತಿ ಮೀರಿದ ಮಾನವೀಯತೆ ಮುಖ್ಯವಾಗಬೇಕು. ಇವೆರಡೂ ಇಲ್ಲದವ ಸಾಹಿತಿಯೂ ಅಲ್ಲ, ಮನುಷ್ಯನೂ ಅಲ್ಲ ಎಂದ ಡಾ.ಪಾತ್ರೋಟ, ಸಾಹಿತಿಯಲ್ಲಿ ಪ್ರೀತಿ, ನಿರ್ಭೀತಿ ಇರಬೇಕು. ಅವನ ಸಾಹಿತ್ಯದಲ್ಲಿ ಮನುಷ್ಯ ಸಂವೇದನೆ ಇರಬೇಕು ಎಂದು ತಿಳಿಸಿದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಲಲಿತಾ ಹೊಸಪ್ಯಾಟಿ ಮಾತನಾಡಿ, ಜಿ.ಕೆ.ತಳವಾರ ಸಾಹಿತ್ಯದಲ್ಲಿ ಗಟ್ಟಿತನವಿದೆ. ಅವರ ಸುಂದರ ಕೃತಿಗಳಲ್ಲಿ ಭಾಷೆಯ ಪ್ರೌಢಿಮೆ ಇದ್ದು, ಅವರು ಸದ್ದಿಲ್ಲದೆ ಸಾಧನೆ ಮಾಡಿದ್ದಾರೆ ಎಂದರು.

ಸಾಹಿತಿ ಎಸ್.ಎಸ್.ಹಳ್ಳೂರ ಅವರು ಜಿ.ಕೆ.ತಳವಾರ ಅವರ ಕಥೆ ಮತ್ತು ಕಾದಂಬರಿಗಳ ಕುರಿತು ಹಾಗೂ ಡಾ.ಬಸವರಾಜ ಕುಂಬಾರ ಅವರು ತಳವಾರರ ಬದುಕು-ಬರಹ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿ.ಕೆ.ತಳವಾರ ದಂಪತಿಯನ್ನು ಸನ್ಮಾನಿಸಲಾಯಿತು.

ಕಮತಗಿ ಹಿರೇಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಆರ್.ಮೂಗನೂರಮಠ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಾಂಡುರಂಗ ಸನ್ನಪ್ಪನವರ ಉಪಸ್ಥಿತರಿದ್ದರು. ಮೇಘಮೇತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ರಮೇಶ ಕಮತಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net