

ಮೈಸೂರು: ಭೂ ಮಾಪಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ಗುಣಮಟ್ಟದ ಕೆಲಸ ಮಾಡಿಸುವ ಮೂಲಕ ರೈತರಿಗೆ ಅನುಕೂಲವಾಗುವಂತೆ ಕರ್ತವ್ಯ ನಿರ್ವಹಿಸಿ ಎಂದು ಮೈಸೂರು ವಿಭಾಗದ ಭೂ ದಾಖಲೆಗಳ ಪ್ರಾದೇಶಿಕ ಜಂಟಿ ನಿರ್ದೇಶಕ ಇ.ಪ್ರಕಾಶ್ ಸಲಹೆ ನೀಡಿದರು.
ಮೈಸೂರು ವಿಭಾಗದ ಹಡಜನದಲ್ಲಿರುವ ಸರ್ವೇ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಭೂದಾಖಲೆಗಳ ಜಂಟಿ ನಿರ್ದೇಶಕ (ನಿವೃತ್ತ) ಸಿ.ಎಸ್.ರಮೇಶ್ ಅವರಿಗೆ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಆ ಮೂಲಕ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೋಶಿಯಲ್ ಆಡಿಟ್ ರೂರಲ್ ಮತ್ತು ಪಂಚಾಯತ್ ರಾಜ್ ನಿರ್ದೇಶಕ ವಿ.ಶ್ರೀಧರ್, ನಿವೃತ್ತ ಭೂದಾಖಲೆಗಳ ಜಂಟಿ ನಿರ್ದೇಶಕರಾದ ಶಿವಮಾದಯ್ಯ, ಸಯ್ಯದ್ ಸಜ್‌ದ್ ಅಹ್ಮದ್, ಮರಿಸ್ವಾಮಿಗೌಡ, ಪ್ರಸಾದ್ ವಿ ಕುಲಕರ್ಣಿ, ಭೂದಾಖಲೆಗಳ ಉಪನಿರ್ದೇಶಕಿ ಕೆ.ರಮ್ಯಾ, ಯುಪಿಒಆರ್ ಡಿಡಿಎಲ್‌ಆರ್ ಶ್ರೀಮಂತಿನಿ ಇತರರು ಇದ್ದರು.