ಉಪಕಾರ ಪ್ರವೃತ್ತಿ ಚಿಕ್ಕಂದಿನಿಂದಲೇ ರೂಢಿಯಾಗಲಿ

swamiji-2
ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ
Published on

ಚನ್ನರಾಯಪಟ್ಟಣ: ಭಗವಂತನ ಆರಾಧನೆ ಮತ್ತು ಉಪಕಾರ ಮಾಡುವ ಪ್ರವೃತ್ತಿಯನ್ನು ಚಿಕ್ಕಂದಿನಿಂದಲೇ ರೂಢಿಸಿಕೊಳ್ಳಬೇಕು ಎಂದು ಶೃಂಗೇರಿ ಮಠದ ಪೀಠಾಧ್ಯಕ್ಷ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಶೃಂಗೇರಿ ಜಗದ್ಗುರುಗಳ ವಿಜಯಯಾತ್ರೆ ಅಂಗವಾಗಿ ಪಟ್ಟಣದ ಬ್ರಾಹ್ಮಣ ಸಂಘದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರು ಶಕ್ತಾನುಸಾರ ಧರ್ಮಾಚರಣೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಚಿಕ್ಕಂದಿನಿಂದಲೇ ಜವಾಬ್ದಾರಿಯಿಂದ ಧರ್ಮಾಚರಣೆ ಮಾಡಬೇಕಿದೆ. ಇದರಿಂದ ವ್ಯಕ್ತಿತ್ವ ವಿಕಸನವಾಗಲಿದೆ. ಜತೆಗೆ ಜವಾಬ್ದಾರಿ ನಿಭಾಯಿಸುವುದರಿಂದ ಭವಿಷ್ಯದಲ್ಲಿ ಎದುರಾಗುವ ಪರಿಸ್ಥಿತಿಯನ್ನು ಎದುರಿಸಬಹುದಾಗಿದೆ ಎಂದು ಹೇಳಿದರು.

ಸನಾತನ ವೈದಿಕ ಧರ್ಮ ಉದ್ಧಾರವಾದರೆ ಜಗತ್ತು ಪ್ರಗತಿ ಹೊಂದಲಿದೆ. ಅಪಚಾರ ಉಂಟಾದರೆ ಜಗತ್ತಿಗೆ ಅದರ ಬಿಸಿ ತಟ್ಟುತ್ತದೆ. ಹಾಗಾಗಿ, ಉತ್ತಮ ಮಾರ್ಗದಲ್ಲಿ ಸಾಗಬೇಕು. ಒಂದು ವೇಳೆ ಯಾರಾದರೂ ತಪ್ಪು ಮಾರ್ಗದಲ್ಲಿ ಸಾಗುತ್ತಿದ್ದರೆ ಅಂಥವರಿಗೆ ತಿಳಿಹೇಳಬೇಕು ಎಂದು ತಿಳಿಸಿದರು.

ಬ್ರಾಹ್ಮಣ ಸಂಘ, ಋತ್ವಕ್ ಸಭಾ, ವಿಪ್ರ ನೌಕರರ ಸಂಘ, ಯುವ ವೇದಿಕೆ, ಗಾಯತ್ರಿ ಪತ್ತಿನ ಸಹಕಾರ ಸಂಘ, ಮಹಿಳಾ ಸಂಘದ ವತಿಯಿಂದ ಶ್ರೀಗಳಿಗೆ ಫಲ ಸಮರ್ಪಿಸಲಾಯಿತು. ನಂತರ ಸ್ವಾಮೀಜಿ ಚಂದ್ರಮೌಳೇಶ್ವರ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net