ಕಸ್ತೂರಬಾ ಗಾಂಧಿ ಅಧ್ಯಯನವಾಗಲಿ

Let Kasturba Gandhi be studied.
ಇಳಕಲ್ಲ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಾತೃದಿವಸ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಮಾತನಾಡಿದರು. ಇಂದುಮತಿ ಪುರಾಣಿಕ, ಬಿ.ಎಂ. ಕಬ್ಬಿಣದ, ಪ್ರೊ.ಬಿ.ಬಿ. ಸುಗ್ಗಮದ ಮತ್ತಿತರರಿದ್ದಾರೆ.
Published on

ಇಳಕಲ್ಲ (ಗ್ರಾ): ಮಹಾತ್ಮ ಗಾಂಧೀಜಿಯ ಹೋರಾಟ, ಸತ್ಯಾಗ್ರಹಗಳಿಗೆ ಬೆನ್ನೆಲುಬಾಗಿ ನಿಂತ ಕಸ್ತೂರಬಾ ಗಾಂಧಿ ಅವರು ಸ್ವಾಂತಂತ್ರೃ ಹೋರಾಟದಲ್ಲಿ ಗಾಂಧೀಜಿಯಷ್ಟೇ ಪ್ರಮುಖರು. ಅವರ ಬಗ್ಗೆ ಹೆಚ್ಚು ಅಧ್ಯಯನಗಳು ನಡೆಯಬೇಕಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ತಿಳಿಸಿದರು.

ತಾಲೂಕಿನ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಕಸ್ತೂರಬಾ ಗಾಂಧಿ ಸ್ಮರಣಾರ್ಥವಾಗಿ ಶನಿವಾರ ಆಯೋಜಿಸಿದ್ದ ಮಾತೃದಿವಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕಿ ಹಾಗೂ ಸಾಹಿತಿ ಇಂದುಮತಿ ಪುರಾಣಿಕ ಮಾತನಾಡಿ, ಗಾಂಧೀಜಿಯೆಂಬ ಮಾನವತೆ ಬೆಳಕು ಬೆಳಗಲು, ಅವರ ಪತ್ನಿ ಕಸ್ತೂರಬಾ ಗಾಂಧಿ ಎಣ್ಣೆಯಾಗಿ, ಬತ್ತಿಯಾಗಿ, ಹಣತೆಯಾಗಿ ಸಹಾಯ ಮಾಡಿದ್ದಾರೆ. ಸಂಸಾರದ ಸುಖ ಅನುಭವಿಸುವ ಬದಲು ಪತಿಯ ಸಿದ್ಧಾಂತ ಹಾಗೂ ವಿಚಾರಧಾರೆಗಳಿಗೆ ಹೆಗಲು ನೀಡಿ ತಾಯ್ನೆಲದ ಸೇವೆಗಾಗಿ ಬದುಕು ಸವೆಸಿ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು.

ಕಾರ್ಯಕ್ರಮ ಸಂಘಟಕ ನೇತಾಜಿ ಗಾಂಧಿ ಮಾತನಾಡಿ, ಸಾತ್ವಿಕ ಹೋರಾಟ ಹಾಗೂ ತಪಸ್ವಿಯಂತೆ ಬದುಕು ನಡೆಸಿ, ಸ್ವಾತಂತ್ರೃ ಹೋರಾಟದಲ್ಲಿ ಸೆರೆಮನೆಯಲ್ಲಿಯೇ ಸಮಾಧಿಯಾದ ಕಸ್ತೂರಬಾ ಗಾಂಧಿಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಮಹಾವಿದ್ಯಾಲಯದ ಚೇರಮನ್ನರಾದ ಬಿ.ಎಂ. ಕಬ್ಬಿಣದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಿ.ಬಿ. ಸುಗ್ಗಮದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಛಾಯಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಸಹನಾ ಕೊಪ್ಪರದ ಪ್ರಾರ್ಥಿಸಿದರು. ಪ್ರೊ. ಎಸ್.ಎಸ್. ಪಾಟೀಲ ಸ್ವಾಗತಿಸಿದರು. ಪ್ರೊ. ಎಸ್.ಆರ್. ಕಲ್ಯಾಣಶೆಟ್ಟಿ ನಿರೂಪಿಸಿದರು. ಪ್ರೊ. ಎಂ.ಎನ್. ಗೌಡರ ವಂದಿಸಿದರು. ಐಕ್ಯೂಎಸಿ ಸಂಯೋಜಕ ಪ್ರೊ. ಪಿ.ಆರ್. ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಪದಾ ಮುಳಗುಂದ, ಭಾರತಿ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net