

ಬೆಂಗಳೂರು: ಇಂದಿನ ಪೀಳಿಗೆ ಕನ್ನಡದ ಬಳಕೆ ಕಡಿಮೆ ಮಾಡುತ್ತಿರುವುದು ಕಳವಳ ವಿಚಾರ. ಮನೆಯೊಳಗೆ ಕನ್ನಡವೇ ಪ್ರಧಾನ ಭಾಷೆಯಾಗಬೇಕು. ಪಾಲಕರು ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ವೈದ್ಯ ಸಾಹಿತಿ ಡಾ.ನಾ.ಸೋಮೇಶ್ವರ ಹೇಳಿದ್ದಾರೆ.
ನಗರದ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾಷೆಯ ಪ್ರಾಚೀನತೆ, ಕರ್ನಾಟಕದ ಇತಿಹಾಸ, ಕನ್ನಡ ಮತ್ತು ಕರ್ನಾಟಕ ಪದಗಳ ಉಗಮ ಹಾಗೂ ಭುವನೇಶ್ವರಿಗೂ ಕನ್ನಡ ನಾಡಿಗೂ ಸಾಂಸ್ಕೃತಿಯ ಸಂಬಂಧ ಇದೆ ಎಂದು ತಿಳಿಸಿದರು.
ಸುವಾರು 35,000 ಕನ್ನಡ ಶಿಲಾಶಾಸನಗಳು, ಪ್ರಾಚೀನ ಹಸ್ತಪ್ರತಿಗಳು ಮತ್ತು ತಾಳೆಗರಿಗಳನ್ನು ಡಿಜಿಟಲೀಕರಣಗೊಳಿಸಬೇಕು. ಕೃತಕ ಬುದ್ಧಿಮತ್ತೆ, ಮಷಿನ್ ಲನಿರ್ಂಗ್ ಮತ್ತು ಐಐಒ ತಂತ್ರಜ್ಞಾನಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದರು.
ಎ್ಕೆಸಿಸಿಐ ಅಧ್ಯಕ್ಷ ಟಿ.ಸಾಯಿರಾಂ ಪ್ರಸಾದ್ ಮಾತನಾಡಿ, ರಾಜ್ಯೋತ್ಸವ ಕೇವಲ ಒಂದು ಹಬ್ಬವಲ್ಲ. ನಮ್ಮ ಅಸ್ಮಿತೆಯನ್ನು, ಶ್ರೀಮಂತಿಕೆಯನ್ನು, ಸಂಸ್ಕೃತಿಯ ವೈಭವ, ಸ್ವಾಭಿವಾನವನ್ನು ಸಂಭ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ವಾಣಿಜ್ಯ ಮಂಡಳಿ ಯಾವಾಗಲೂ ವ್ಯಾಪಾರ, ವಾಣಿಜ್ಯಕ್ಕೆ ವಾತ್ರ ಅಲ್ಲ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಅಭಿವಾನದ ಪರವಾಗಿಯೂ ನಿಂತಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದರು.
ವಿವಿಧ ಕ್ಷೇತ್ರದ ಸಾಧಕರಾದ ವೈದ್ಯರತ್ನ ಡಾ.ಸಿ.ಎ. ಕಿಶೋರ್, ಕೆ.ಧನಪಾಲ್, ಕೆ.ಪರಮೇಶ್ವರ, ಡಾ. ಪಿಚ್ಚಳ್ಳಿ ಶ್ರೀನಿವಾಸ, ಎಸ್.ಯಶಸ್ವಿನಿ ಎಸ್, ಯೋಗಿ ಮಹೇಶ್, ಪಂಡಿತ್ ವಿಶ್ವನಾಥ್ ನಾಕೋಡ, ಡಾ.ಕೆ.ಆರ್. ವೇಣುಗೋಪಾಲ್, ವೇಣುಗೋಪಾಲ, ಜಯಚಂದ್ರ, ಸುರೇಶ್ ಮೂನ ಅವರಿಗೆ ಎಫ್‌ಕೆಸಿಸಿಐ ಕನ್ನಡ ನಾಡ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.