ನಮ್ಮೆಲ್ಲರ ಬದುಕಿನ ಉಸಿರಾಗಲಿ ಕನ್ನಡ

RATHA
ಮುಂಡರಗಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ರಥವನ್ನು ತಹಸೀಲ್ದಾರ್ ಧನಂಜಯ ಸೇರಿ ಕನ್ನಡಾಭಿಮಾನಿಗಳು ಮಂಗಳವಾರ ಸಂಭ್ರಮದಿಂದ ಸ್ವಾಗತಿಸಿದರು. ಎಚ್.ಎಂ. ಫಡ್ನೇಶಿ, ಎಂ.ಜಿ. ಗಚ್ಚಣ್ಣವರ, ಆರ್.ಎಲ್. ಪೊಲೀಸ ಪಾಟೀಲ ಇತರರಿದ್ದರು.
Published on

ಮುಂಡರಗಿ: ‘ಕರ್ನಾಟಕ ಸಂಭ್ರಮ 50’ರ ಪ್ರಯುಕ್ತ ಎಲ್ಲೆಡೆ ಸಂಚರಿಸುತ್ತಿರುವ ಕನ್ನಡ ರಥ ಮಂಗಳವಾರ ಪಟ್ಟಣಕ್ಕೆ ಆಗಮಿಸಿತು. ತಹಸೀಲ್ದಾರ್ ಕಾರ್ಯಾಲಯದ ಮುಂದೆ ತಹಸೀಲ್ದಾರ್ ಧನಂಜಯ ಎಂ., ಕಸಾಪ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಪುಷ್ಪ ಅರ್ಪಿಸಿ ಸಂಭ್ರಮದಿಂದ ಸ್ವಾಗತಿಸಿದರು. ನಂತರ ವಾದ್ಯಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಸಾಹಿತಿ ಆರ್.ಎಲ್. ಪೊಲೀಸ ಪಾಟೀಲ ಮಾತನಾಡಿ, ಪ್ರತಿಯೊಬ್ಬರು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಸಾಹಿತ್ಯದ ಮೇಲೆ ಅಪಾರ ಪ್ರೀತಿ ಗೌರವವನ್ನು ಹೊಂದಬೇಕು. ಕನ್ನಡತನವನ್ನು ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ತಹಸೀಲ್ದಾರ್ ಧನಂಜಯ ಮಾತನಾಡಿ, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಂತೆ ಕನ್ನಡ ನಾಡಿನ ಏಳಿಗೆಗೆ ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸುವ ಕೆಲಸ ಮಾಡಬೇಕು ಎಂದರು.

ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ರಥ ಯಾತ್ರೆ ಕೈಗೊಂಡಿದ್ದು, ಕನ್ನಡಮ್ಮನ ಸೇವೆಗೆ ನಾವೆಲ್ಲರೂ ಬದ್ಧರಾಗಿ ಸದಾ ಶ್ರಮಿಸಬೇಕು ಎಂದರು.

ಬಿಇಒ ಎಚ್.ಎಂ. ಫಡ್ನೇಶಿ, ಮಂಜುನಾಥ ಇಟಗಿ, ಬಿ.ವಿ. ಮುದ್ದಿ, ಎಸ್.ಬಿ. ಹಿರೇಮಠ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಮಂಜುನಾಥ ಮುಧೋಳ, ಅಡಿವೆಪ್ಪ ಚಲವಾದಿ, ಕೃಷ್ಣ ಸಾಹುಕಾರ, ಗಂಗಾಧರ ಅಣ್ಣಿಗೇರಿ, ಆರ್.ವೈ. ಪಾಟೀಲ, ಶ್ರೀನಿವಾಸ ಅಬ್ಬಿಗೇರಿ, ಎಂ.ಎಸ್. ಹೊಟ್ಟಿನ, ಕಾಶಿನಾಥ ಶಿರಬಡಗಿ, ಲಕ್ಷ್ಮಣ ತಗಡಿನಮನಿ, ಎಸ್.ಎಸ್. ಬಿಚ್ಚಾಲಿ, ಆರ್.ಕೆ. ರಾಯನಗೌಡ್ರ, ಎಚ್.ಎಂ. ಪಾಟೀಲ, ಎಂ.ಕೆ. ತಳಗಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net