ಕಡಣಿ ಕಲ್ಲಪ್ಪನ ಹೆಸರಿನಲ್ಲಿ ಜಾನಪದ ಕೇಂದ್ರವಾಗಲಿ

Let Kadani become a folklore center in the name of Kallappa.
ವಿಭೂತಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಆಲಮೇಲ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ವೇ. ಚನ್ನವೀರಸ್ವಾಮಿ ಹಿರೇಮಠ ಮಾತನಾಡಿದರು. ಶಿವಶರಣ ಗುಂದಗಿ, ಅಶೋಕ ಮನಗೂಳಿ, ರಮೇಶ ಭೂಸನೂರ, ಸಾಧಿಕ್ ಸುಂಬಡ ಮತ್ತಿತರಿದ್ದಾರೆ.
Published on

ಆಲಮೇಲ: ಕನ್ನಡ ಭಾಷೆಯು ಸುಮರು 2000 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ ಎಂದು ಆಲಮೇಲ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ವೇ. ಚನ್ನವೀರ ಸ್ವಾಮಿ ಹಿರೇಮಠ ಹೇಳಿದರು.

ವಿಭೂತಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಆಲಮೇಲ ತಾಲೂಕು 2ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೌಖಿಕ ಭಾಷೆಯಾಗಿದ್ದ ಕನ್ನಡವು ಏಳನೇ ಶತಮಾನದ ಹೊತ್ತಿಗೆ ಸಾಹಿತ್ಯದ ಗದ್ದುಗೆಯನ್ನು ಏರಿದ್ದು ಸ್ಪಷ್ಟವಾಗುತ್ತದೆ. ಗೀಗೀ ಪದಗಳ ಜನಕ ಕಡಕಣಿ ಕಲ್ಲಪ್ಪನ ಹೆಸರಿನಲ್ಲಿ ಜಾನಪದ ಅಧ್ಯಯನ ಕೇಂದ್ರವಾಗಬೇಕು. ಇದರಿಂದ ಈ ಭಾಗದ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಲು ಸಾಧ್ಯವಾಗುತ್ತದೆ. ತಾಲೂಕಿನ ದೇವಣಗಾಂವ, ಕಡಣಿ, ಕೋರಹಳ್ಳಿ, ಆಲಮೇಲ, ಬಳಗಾನೂರ, ದೇವರ ನಾದಗಿ, ಕುಮಸಗಿ, ಮದರಿ ಗ್ರಾಮಗಳು ದೊಡ್ಡಾಟಕ್ಕೆ ಪ್ರಸಿದ್ಧಿ ಪಡೆದಿವೆ ಎಂದರು.

ಆಲಮೇಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಶರಣ ಗುಂದಗಿ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. 40ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪರಿಷತ್ತಿನ ಕಟ್ಟಡವು ಸಾಹಿತ್ಯಾಸಕ್ತರಿಗೆ ಉಪಯೋಗವಾಗಲಿದೆೆ ಎಂದರು.

ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿದರು, ಮಾಜಿ ಶಾಸಕ ರಮೇಶ ಭೂಸನೂರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ್ ಸುಂಬಡ ಸಮ್ಮೇಳನ ಅಧ್ಯಕ್ಷರ ನುಡಿ ಪುಸ್ತಕ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು, ಆಸಂಗಿಹಾಳದ ಶಂಕರಾನಂದ ಮಹಾರಾಜರು, ದೇವರ ಗುಡ್ಡ ಗುರುಪೀಠದ ಡಾ. ಸಂದೀಪ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಬಾಬು ಬಿಜ್ಜರಗಿ, ಸಿದ್ದರಾಮಯ್ಯ ಉಪ್ಪಿನ, ಎಪಿಎಂಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಶಿವಕುಮಾರ ಗುಂದಗಿ, ಚನ್ನಪ್ಪ ಹಚಡದ, ಅಶೋಕ ತೆಲ್ಲೂರ, ಆನಂದ ಭೂಸನೂರ, ಆರ್.ಎಚ್.ಬಿರಾದಾರ, ಅಂದಾನೆಪ್ಪ ವಿಭೂತಿ, ಎಂ.ಪಿ.ಪರ್ವತಗೌಡ ಮತ್ತಿತರರಿದ್ದರು.

ವಿಭೂತಿಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ಶಾಲೆ ವಿದ್ಯಾರ್ಥಿನಿಯರು ನಾಡಗೀತೆ, ಆಲಮೇಲದ ಆರ್‌ಎಂಎಸ್‌ಎ ಶಾಲೆ ವಿದ್ಯಾರ್ಥಿನಿಯರು ರೈತ ಗೀತೆ ಹಾಡಿದರು. ಅನ್ವಿತಾ ಹೊಸಮನಿ ಅವರಿಂದ ಭರತನಾಟ್ಯ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ರಮೇಶ ಬಂಟನೂರ ಸ್ವಾಗತಿಸಿದರು, ಶ್ರೀಶೈಲ ಮಠಪತಿ ಹಾಗೂ ಪ್ರೋ. ಗಂಗಾಧರ ಪತ್ತಾರ ಕಾರ್ಯಕ್ರಮ ನಿರೂಪಣೆ ಮಾಡಿದರು, ಎಂ.ಎಸ್. ಚೌದರಿ ನಿರ್ವಹಣೆ ಮಾಡಿದರು. ಚಂದ್ರಶೇಖರ ಕೆಳಗಿನಮನಿ, ಅಶೋಕ ಮಾದರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net