

ಹುಬ್ಬಳ್ಳಿ: ವೈದ್ಯರಂತೆ ಪತ್ರಕರ್ತರೂ ಸಾಮಾಜಕ್ಕೆ ಚಿಕಿತ್ಸಕರಾಗಬೇಕು. ಇದರಿಂದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯ ಪತ್ರಕರ್ತ ಸನತಕುಮಾರ ಬೆಳಗಲಿ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಕರ್ತ ಡಾ. ಶಿವರಾಮ ಅಸುಂಡಿ ಅವರ ‘ನೀರಹೆಣ’ ಕಥಾ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪತ್ರಕರ್ತರು ವೈದ್ಯರಿದ್ದಂತೆ. ವೈದ್ಯ ರೋಗಿಯ ಚಿಕಿತ್ಸೆ ಬಗ್ಗೆ ವಿಚಾರ ಮಾಡುತ್ತಾನೆ. ಹಾಗೆಯೇ ಪತ್ರಕರ್ತರಿಗೂ ಜಾತಿ ಧರ್ಮಗಳಿರಬಾರದು. ಸಕಲ ಜೀವಾತ್ಮರಿಗೆ ಲೆಸನ್ನೆ ಬಯಸುವಂತವರಾಗಬೇಕು ಎಂದರು.
ಶಿವರಾಮ ಅಸುಂಡಿ ಅವರು ಗ್ರಾಮೀಣ ಜಗತ್ತಿನ ತಲ್ಲಣ, ತಳ ಸುಮುದಾಯದ ನೋವುಗಳನ್ನು ಜಾಗತೀಕರಣದ ನೆಲೆಯಲ್ಲಿ ಅರ್ಥೈಸಿದ್ದಾರೆ. ಸಾಮಾಜಿಕ ಕಾಳಜಿ ಎದ್ದು ಕಾಣುತ್ತಿದೆ. ಯಾರೇ ಆಗಲಿ ಸಂಬಳಕ್ಕಾಗಿ ಕೆಲಸ ಮಾಡಬಾರದು. ಹಸಿದವರ ಪರವಾಗಿ ಪತ್ರಕರ್ತರಾಗಿರಬೇಕು ಎಂದರು.
ಸಾಹಿತಿ ಟಿ.ಎಸ್. ಗೊರವರ ಕೃತಿ ಪರಿಚಯ ಮಾಡಿದರು.
ಎಸಿಪಿ ವಿನೋದ ಮುಕ್ತೇದಾರ ಅಧ್ಯಕ್ಷತೆ ವಹಿಸಿದ್ದರು.
ಕೆಎಸ್‌ಎಂ ಟ್ರಸ್ಟ್ ಕಾರ್ಯದರ್ಶಿ ಡಾ.ಎಂ. ಬೈರೇಗೌಡ ಪ್ರಸ್ತಾವಿಕವಾಗಿ ಮಾತನಾಡಿದರು.
ಕೃತಿಕಾರ ಡಾ. ಶಿವರಾಮ ಅಸುಂಡಿ, ಪತ್ರಕರ್ತರಾದ ಗುರುರಾಜ ಹೂಗಾರ, ಮಹೇಂದ್ರ ಚವ್ಹಾಣ, ಪರಶುರಾಮ ತಹಶೀಲ್ದಾರ ಇತರರು ಇದ್ದರು.