ಜೆಎಲ್‌ಬಿಸಿ ಕಾಲುವೆಗೆ ನೀರು ಹರಿಸಲಿ

23CKD1.jpg
Published on

ಚಿಕ್ಕೋಡಿ: ಜೆಎಲ್‌ಬಿಸಿ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೆತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಕಾರಿಗಳು
ಉಪವಿಭಾಗಾಕಾರಿ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಚಿಕ್ಕೋಡಿ ಜೆಎಲ್‌ಬಿಸಿ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ರೆತ ಸಂಘಟನೆಗಳ ಪದಾಕಾರಿಗಳು ತಹಸೀಲ್ದಾರ್ ಪ್ರಮಿಳಾ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು. ಮಂಜುನಾಥ ಪರಗೌಡ, ಬಾಪು ಕುತ್ತೆ, ಬಾಳಗೌಡ ಪಾಟೀಲ, ಸತ್ಯಪ್ಪ ದೇವಾನಗೊಳ, ರಂಜಾನ್ ಮುಲ್ಲಾ,ಶಂಕರ ಹೆಗಡೆ ಇತರರಿದ್ದರು.

ಹಸಿರು ಸೇನೆ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ ಮಾತನಾಡಿ, ಚಿಕ್ಕೋಡಿ ತಾಲೂಕಿನ ಕೇರೂರ, ಸಿದ್ದಾಪುರವಾಡಿ, ರೂಪಿನಾಳ, ಅರಬ್ಯಾನವಾಡಿ, ಕಾಡಾಪುರ, ನಣದಿವಾಡಿ, ರಾಯಬಾಗ ತಾಲೂಕಿನ ಹಣಬರಟ್ಟಿ, ನಂದಿಕುರಳಿ, ಕೆಂಪಟ್ಟಿ ಸೇರಿ ವಿವಿಧ ಗ್ರಾಮಗಳ ಜಮೀನಿಗೆ ಜೆಎಲ್‌ಬಿಸಿ ಕಾಲುವೆ ಮೂಲಕ ನೀರು ಹರಿಸುವಂತೆ ಆಗ್ರಹಿಸಿದರು.

ರೆತರ ಸಾಲಮನ್ನಾ, ಪ್ರತಿ ದಿನ 7 ಗಂಟೆ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಪೂರೆಕೆ, ಕಾಲುವೆಗೆ ಎರಡು ದಿನದೊಳಗೆ ನೀರು ಹರಿಸದೆ ಹೋದಲ್ಲಿ ಜೇವರ್ಗಿ- ಸಂಕೇಶ್ವರ
ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರೈತ ಸಂಘಟನೆಯ ಮಂಜುನಾಥ ಪರಗೌಡ, ಬಾಪು ಕುತ್ತೆ, ಬಾಳಗೌಡ ಪಾಟೀಲ, ಸತ್ಯಪ್ಪ ದೇವಾನಗೋಳ, ರಂಜಾನ್ ಮುಲ್ಲಾ, ಬಾಬಾಸಾಬ್ ಮುಲ್ಲಾ, ಶಂಕರ ಹೆಗಡೆ, ಶಿವಾನಂದ ಕೋಳಿ, ಅಜಿತ ಮುರನಾಳೆ, ಬಾಬು ಹವಾಲ್ದಾರ್, ರಫೀಕ್
ಪಠಾಣ್,  ಸಿದ್ದು ಪಾಟೀಲ, ಈಶ್ವರ ಪಾಟೀಲ
ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net