

ಹಿರೇಕೆರೂರ: ರಾಜಕೀಯದಲ್ಲಿ ಶಿಕ್ಷಣ ಇರಬೇಕೇ ಹೊರತು, ಶಿಕ್ಷಣದಲ್ಲಿ ರಾಜಕೀಯ ಬೆರೆಸಬಾರದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಜಿಪಂ ಹಾವೇರಿ, ತಾಪಂ, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಬಳಸುವುದನ್ನು ನಿಲ್ಲಿಸಬೇಕು. ಸಂಪೂರ್ಣವಾಗಿ ಶಿಕ್ಷಣ ಕಲಿಸಲು ಶಿಕ್ಷಕರು ಮೀಸಲಿರಬೇಕು. ಈ ವಿಷಯವಾಗಿ ಸದನದಲ್ಲಿ ಗಮನಹರಿಸಲಾಗುವುದು ಎಂದರು.
ಬಿಇಒ ಎನ್. ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಪ್ರಕಾಶ ಮನ್ನಂಗಿ ಅವರು ಉಪನ್ಯಾಸ ನೀಡಿದರು. ತಾಲೂಕಿನ ಎಲ್ಲ ಶಿಕ್ಷಕರಿಗೆ ಶಾಸಕರು ವೈಯುಕ್ತಿಕವಾಗಿ ಬ್ಯಾಗ್ ವಿತರಿಸಿದರು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಪಟ್ಟಣದ ಜಿ. ಬಿ. ಶಂಕರಾವ್ ವೃತ್ತದಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ಮೆರವಣಿಗೆ ನಡೆಯಿತು.
ತಾಪಂ ಇಒ ಎಚ್. ಶಶಿಧರ್, ಮಹೇಂದ್ರ ಬಡಳ್ಳಿ, ಚಂದ್ರಕಲಾ ಕೋರಿಗೌಡ್ರ, ಕವಿತಾ ಹಾರ‌್ನಳ್ಳಿ, ಎನ್.ಎಸ್. ಹೆಗ್ಗೇರಿ, ಕುಮಾರ ಪುಟ್ಟಪ್ಪಗೌಡ್ರ, ರಮೇಶ ಪೂಜಾರ, ಎಸ್.ಎಂ. ಫೀರಜಾದೆ, ಡಾ. ಎಸ್.ಪಿ. ಗೌಡರ, ರಾಜೇಂದ್ರ ಬೆಟ್ಟಳ್ಳೇರ, ಎ.ಆರ್. ಬಡಗೌಡರ, ಎನ್. ಸುರೇಶಕುಮಾರ, ಸಿ.ಸಿ. ದೊಡ್ಡಮನಿ, ಆರ್.ಎಚ್. ಪೂಜಾರ, ಆರ್.ಎಚ್. ದೊಡ್ಮನಿ ಇತರರು ಇದ್ದರು.
ಮಾರುತೆಪ್ಪ ಕೆ.ಎಚ್., ನಂದೀಶ ಲಮಾಣಿ, ಶೋಭಾ ಕೊಪ್ಪದ ರವಿಕುಮಾರನಾಯ್ಕ ಎಂ.ಎಚ್. ನಿರ್ವಹಿಸಿದರು.